ಮುಂಬೈ : ವಿದ್ಯಾವಂತರು ತಮ್ಮ ಜೀವನದಲ್ಲಿ ಒಂದು ಸುವ್ಯವಸ್ಥಿತ ಉದ್ಯೋಗ ಸಿಗಲು ಇಂದಿನ ಜಗತ್ತಿನಲ್ಲಿ ತಡಕಾಡುತ್ತಿದ್ದಾರೆ. ಅದರಲ್ಲೂ ಪ್ರತಿಷ್ಠಿತ ಬ್ಯಾಂಕಿಂಗ್ ಸೇವೆಯಲ್ಲಿ ಸೇವೆ ಸಲ್ಲಿಸಲು ಹೆಚ್ಚಿನ ಯುವ ಸಮುದಾಯ ಹಾತೊರೆಯುತ್ತಿದೆ. ಅಂತವರಿಗೆ ಇದೀಗ ಉಜ್ವಲ ಅವಕಾಶ ಒದಗಿ ಬಂದಿದೆ. ಭಾರತದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 1,040 ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಒಟ್ಟು 1,040 ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ (SCO) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ವಿಪಿ ವೆಲ್ತ್, ಹೂಡಿಕೆ ತಜ್ಞ, ಹೂಡಿಕೆ ಅಧಿಕಾರಿ, ಸಂಬಂಧ ವ್ಯವಸ್ಥಾಪಕ- ಟೀಮ್ ಲೀಡ್, ಸೆಂಟ್ರಲ್ ರಿಸರ್ಚ್ ಟೀಮ್ ಹುದ್ದೆಗಳು, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ (ತಂತ್ರಜ್ಞಾನ ಮತ್ತು ವ್ಯವಹಾರ) ಮತ್ತು ಪ್ರಾದೇಶಿಕ ಮುಖ್ಯಸ್ಥರು ಸೇರಿದಂತೆ ಅನೇಕ ಹುದ್ದೆಗಳಿವೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಜುಲೈ 19ರಿಂದಲೇ ವಿವಿಧ ಸ್ಪೆಷಲಿಸ್ಟ್ ಕೇಡರ್ ಆಫೀಸರ್ಸ್ (SCO) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭವಾಗಿದೆ ಆಸಕ್ತ ಅಭ್ಯರ್ಥಿಗಳು ಎಸ್ಬಿಐ ಎಸ್ಒ ನೇಮಕಾತಿ 2024ಗೆ ಸಂಬಂಧಿಸಿದ ಅಧಿಕೃತ ವೆಬ್ಸೈಟ್ sbi.co.in ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನೋಂದಣಿ ಜುಲೈ 19ರಂದು ಪ್ರಾರಂಭಗೊಂಡಿದ್ದು, ಆಗಸ್ಟ್ 8ರಂದು ಮುಕ್ತಾಯವಾಗಲಿದೆ. ಪರೀಕ್ಷಾ ಶುಲ್ಕವನ್ನು ಪಾವತಿಸಲು ಆಗಸ್ಟ್ 8 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕ
ಕಾಯ್ದಿರಿಸದ ಅಥವಾ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಎಸ್ಬಿಐ ಎಸ್ಒ ಅಪ್ಲಿಕೇಶನ್ 2024 ಶುಲ್ಕವಾಗಿ 750 ರೂ. ನಿಗದಿಪಡಿಸಲಾಗಿದೆ. ಆದರೆ ಎಸ್ ಸಿ, ಎಸ್ ಟಿಯಂತಹ ಮೀಸಲಾತಿ ವರ್ಗದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಿಲ್ಲ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳನ್ನು ನೋಡಿ ಅರ್ಹ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ಆಯ್ಕೆ ಮಾಡಲಾಗುತ್ತದೆ. ಬಳಿಕ ಅದರಲ್ಲಿ ಅರ್ಹರಾದವರಿಗೆ ಸಂದರ್ಶನ ನಡೆಸಿ ಸೂಕ್ತರಾದವರನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಈ ಕುರಿತು ಇರುವ ಸಂಪೂರ್ಣ ವಿವರಗಳನ್ನು ಪರಿಶೀಲಿಸಬಹುದು. ಮಾಹಿತಿಗೆ ಅಭ್ಯರ್ಥಿಗಳು ಎಸ್ಬಿಐನ ಅಧಿಕೃತ ವೆಬ್ಸೈಟ್ sbi.co.inಗೆ ಭೇಟಿ ನೀಡಬಹುದು.