ರಾಯಬಾಗ: ಪಟ್ಟಣದ ಡಾ. ಬಾಬುರಾವ್ ನಡೋಣಿ ರಾಷ್ಟ್ರೀಯ ಪ್ರತಿಷ್ಠಾನದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಾರ್ಚ್ 8ರಂದು ತಮ್ಮ ಪ್ರತಿಷ್ಠಾನದಿಂದ ಸಾಹಿತ್ಯ ಪೋಷಕರಾದ ಪುಷ್ಪಾ ಜ್ಯೋತಿ ಹೊಸೂರ, ಡಾ.ರತ್ನ ಬಾಳಪ್ಪನವರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಶೈಲಜಾ ಬೆಳಗಾಂವಕರ, ಡಾ.ಗಾಯತ್ರಿ ಬಾನೆ, ಡಾ ಮನಿಷಾ ರಾವಳಕರ, ಡಾ. ಸುರೇಖಾ ಸಂಗಟಿ, ಡಾ.ಆರತಿ ಚಿನಕೊಟಿ, ಡಾ ಗೀತಾ ನಾಯಕ, ಡಾ.ವಿಜಯಾ ಡಾಂಗೆ ಇವರಿಗೆ ಮದರ್ ತೆರೇಸಾ ಪ್ರಶಸ್ತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಉಪನ್ಯಾಸಕ ಅಣ್ಣಪ್ಪ ಕುಂಬಾರ ಇವರಿಗೆ ಗೌರವ ಸನ್ಮಾನ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಾಬುರಾವ್ ನಡೋಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.