ಅಥಣಿ :
ಜನಪ್ರತಿನಿಧಿಯಾದರೂ ಸಹಸ್ರಾರು ಜನರಿಗೆ ಸಹಾಯ ಮಾಡಬೇಕು ಎಂಬ ಮಾನವೀಯ ಹೃದಯದ ರಾಜಕಾರಣಿಗಳು ಇಂದು ಸಿಗುವುದು ಬಲು ಅಪರೂಪ. ಆದರೆ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರ ಕೆಲ ಸಮಾಜ ಸೇವಾ ಕಾರ್ಯಗಳು ತೆರೆಮರೆಯಲ್ಲೇ ಜನರ ಪ್ರೀತಿಗೆ ಪಾತ್ರವಾಗಿವೆ. ಅದರಲ್ಲೂ ಅವರು ನೀಡುವ ಸೇವಾ ಕಾರ್ಯಗಳು ಬಡವರಿಗೆ ಪೂರಕವಾಗುತ್ತವೆ. ಅವರ ಮುಂದಿನ ಬದುಕಿಗೆ ಆಸರೆ ಯಾಗುತ್ತಿವೆ. ಅಂಥದ್ದೊಂದು ನಿದರ್ಶನ ಇಲ್ಲಿದೆ.
ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಇರುವಾಗಲೇ ಅಕಸ್ಮಾತಾಗಿ ಮರದಿಂದ ಕೆಳಗೆ ಬಿದ್ದು ಅವಘಡ ಸಂಭವಿಸಿದ ಪರಿಣಾಮ ನಡೆದಾಡುವ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ಗುಂಡೆವಾಡಿ ಗ್ರಾಮದ ಹಣಮಂತ ಕುರುಬರ ಎಂಬುವವರಿಗೆ ವಿದ್ಯುತ್ ಚಾಲಿತ ವಾಹನ ನೀಡುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾನವೀಯತೆಯ ಸೇವೆ ಮೆರೆದಿದ್ದಾರೆ.
ದಿನಂಪ್ರತಿ ದುಡಿದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು.
ಕುಟುಂಬ ನಿರ್ವಹಣೆ ನಡೆಸುವುದೇ ಅವರ ಪಾಲಿಗೆ ಅತ್ಯಂತ ಕಠಿಣವಾಗಿತ್ತು.
ಇಂಥ ಸಂದರ್ಭದಲ್ಲಿ ಅವರ ಅವಘಡದ ಪ್ರಮುಖ ಖಾಸಗಿ ಸುದ್ದಿ ವಾಹಿನಿಯಲ್ಲಿ ಗಮನಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಆ ಬಡ ವ್ಯಕ್ತಿಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದರು. ಅದರಂತೆ ಆ ವ್ಯಕ್ತಿಯ ಬದುಕಿನಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ವಾಹನ ವಿತರಣೆ ಮಾಡಿ ಬೆಳಕು ಮೂಡುವಂತೆ ಮಾಡಿದರು.
ಅಂಧಕಾರದಲ್ಲಿ ಮುಳುಗಿದ್ದ ಕುಟುಂಬಕ್ಕೆ ಬೆಳಕು ಉಂಟು ಮಾಡುವಂತಹ ಸಣ್ಣ ಅವಕಾಶ ನನಗೆ ಒದಗಿ ಬಂದದ್ದು ನನ್ನ ಸೌಭಾಗ್ಯವೆಂದು ಭಾವಿಸಿರುವೆ. ಮುಂಬರುವ ದಿನಮಾನಗಳಲ್ಲಿ ನಮ್ಮ ತಾಲೂಕಿನಲ್ಲಿ ಇಂತಹ ಅನೇಕ ಬಡ ವ್ಯಕ್ತಿಗಳು ಇದ್ದು ಅವರನ್ನು ಗುರುತಿಸಿ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಶಿವರುದ್ರಪ್ಪ ಗುಳಪ್ಪನವರ,ನಿಂಗಪ್ಪ ಖೋಕಲೆ,ರಾಜು ಪಾಟೀಲ, ಶ್ರೀಶೈಲ ನಾಯಕ,ಮಹಾಂತೇಶ ಠಕ್ಕಣ್ಣನವರ,ರಾಹುಲ್ ನಾಯಕ,ಲೋಕೇಶ್ ಪಾಟೀಲ್, ಸಿದ್ದರಾಮ ಬಿಳ್ಳೂರ,ನೇಮಣ್ಣ ಅಸ್ಕಿ,ಶ್ರೀನಿವಾಸ ಪಟ್ಟಣ ಸೇರಿದಂತೆ ಅನೇಕರು ಇದ್ದರು.