ಜನ ಜೀವಾಳ ಜಾಲ: ಬೆಳಗಾವಿ :ಸವದತ್ತಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಈ ಬಾರಿ ವಿಶ್ವಾಸ ವೈದ್ಯ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇದರಿಂದ ಮತ್ತೊಬ್ಬ ಆಕಾಂಕ್ಷಿ ಸೌರಭ ಚೋಪ್ರಾ ಕೆಂಡಾಮಂಡಲವಾಗಿದ್ದಾರೆ.
ಇವತ್ತು ಅವರು ತಮ್ಮ ಬೆಂಬಲಿಗರ ಸಭೆ ಕರೆದಿದ್ದು ಆ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸುವ ಸಾಧ್ಯತೆ ಇದೆ. ಸವದತ್ತಿ ವಿಧಾನಸಭಾ ಮತಕ್ಷೇತ್ರದಲ್ಲಿ ಈ ಹಿಂದೆ ಅವರ ತಂದೆ ಆನಂದ ಚೋಪ್ರಾ ಎರಡು ಬಾರಿ ಸ್ಪರ್ಧಿಸಿದ್ದರು. ತಂದೆಯ ಅಕಾಲಿಕ ನಿಧನ ನಂತರ ಸೌರಬ್ ಚೋಪ್ರಾ ರಾಜಕೀಯಕ್ಕೆ ಪ್ರವೇಶ ಪಡೆದಿದ್ದರು. ಕಾಂಗ್ರೆಸ್ ಟಿಕೆಟ್ ಈ ಬಾರಿ ತಮಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈ ಸಲವೂ ವಿಶ್ವಾಸ ವೈದ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸೌರಬ್ ಚೋಪ್ರಾ ಇಂದು ಬೆಂಬಲಿಗರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕೆ ಸಭೆ ಕರೆದಿದ್ದಾರೆ. ಅವರೆಲ್ಲರ ಅಭಿಪ್ರಾಯ ಪಡೆದ ನಂತರ ತಮ್ಮ ಘೋಷಣೆ ನಿರ್ಧರಿಸುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ ಎರಡು ಗಂಟೆಗೆ ತಮ್ಮ ಕಚೇರಿಯಲ್ಲಿ ಸಭೆ ಕರೆದಿದ್ದಾರೆ. ಸವದತ್ತಿ ತಾಲೂಕಿನ ಸಾವಿರಾರು ಕಾರ್ಯಕರ್ತರು ಸಭೆಗೆ ಹಾಜರಾಗುವ ನಿರೀಕ್ಷೆ ಇದೆ. ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸುದ್ದಿ ತಿಳಿದ ಸೌರಬ್ ಚೋಪ್ರಾ ಅವರ ತಾಯಿ ಮಗನನ್ನು ಸಂತಹಿಸುವ ವಿಡಿಯೋ ಭಾರೀ ವೈರಲ್ ಲಾಗಿದೆ.