ಬೆಳಗಾವಿ : ಇಲ್ಲಿಯ ರಂಗಸೃಷ್ಟಿ ಕಲಾವಿದರಿಂದ ಶನಿವಾರ ( ಜು.12) ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ ನಡೆಯಲಿದೆ.
ರಂಗಸೃಷ್ಟಿ, ಲಿಂಗಾಯತ ಮಹಿಳಾ ಸಮಾಜ, ನಾವು ನಮ್ಮವರೊಂದಿಗೆ ಹಾಗೂ ಕನ್ನಡಭವನ ಸಹಯೋಗದಲ್ಲಿ ಅಂದು ಸಂಜೆ 6.30ರಿಂದ ನಾಟಕ ನಡೆಯಲಿದೆ. ನೀರಾವರಿ ಇಲಾಖೆಯ ಪ್ರಧಾನ ಅಭಿಯಂತರ ಅಶೋಕ ವಾಸನದ ಹಾಗೂ ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಅತಿಥಿಗಳಾಗಿ ಆಗಮಿಸುವರು. ಡಾ.ರಾಮಕೃಷಅಣ ಮರಾಠೆ ರಚಿಸಿರುವ ನಾಟಕವನ್ನು ಶಿರೀಷ್ ಜೋಶಿ ನಿರ್ದೇಶಿಸಿದ್ದಾರೆ.
ನಾಟಕ ವೀಕ್ಷಣೆಗೆ ಉಚಿತ ಪ್ರವೇಶವಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಕೋರಿದ್ದಾರೆ.