ಖಾನಾಪುರ: ಖಾನಾಪುರ ತಾಲೂಕಿನ ಪಾರಿಶ್ವಾಡ, ಇಟಗಿ, ಅವರೊಳ್ಳಿ, ಕಡತನ ಬಾಗೇವಾಡಿ, ಬೀಡಿ, ಕಕ್ಕೇರಿ, ಲಿಂಗನ ಮಠ, ಖಾನಾಪುರ, ಬೀಡಿ ಹಾಗೂ ಕಿತ್ತೂರು ಪ್ರದೇಶಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು.
ಮುಂಬರುವ ದಿನಗಳಲ್ಲಿ ಈ ಪ್ರದೇಶಗಳ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದಾಗಿ ಶಾಸಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.
ಕಿತ್ತೂರ ಶಾಸಕ ಬಾಬಾಸಾಬ ಪಾಟೀಲ, ತಾಲೂಕು ಮತ್ತು ಜಿಲ್ಲಾ ಪಿಡಬ್ಲುಡಿ ಅಧಿಕಾರಿಗಳು ಉಪಸ್ಥಿತರಿದ್ದರು.