ಬೆಳಗಾವಿ :ಸರ್ವಪಲ್ಲಿ ರಾಧಾಕೃಷ್ಣನ್ ರು ಕೆ.ಎಲ್.ಇ. ಸಂಸ್ಥೆಯ ಹಂಚಿನಾಳ ಪೂರ್ವ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿದವರು. ಕೆ.ಎಲ್.ಇ ಅಂಗಳದಲ್ಲಿ ನಡೆದಾಡಿದವರು ಎಂದು ಆಜೀವ ಸದಸ್ಯ ಮಹಾದೇವ ಬಳಿಗಾರ ಹೇಳಿದರು.
ಕೆಎಲ್ ಇ ಸಂಸ್ಥೆಯ ಜಿ.ಎ. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶಿಕ್ಷಕರಾಗುವ ಕನಸು ಹೊಂದುವವರು. ಸಮಯವನ್ನು ಗೌರವಿಸಬೇಕು. ಆಚಾರ ವಿಚಾರದಲ್ಲಿ ಸರಳತೆ ಮೈಗೂಡಿಸಿಕೊಂಡು, ಹಿರಿಯ ಕಿರಿಯರನ್ನು ಗೌರವಿಸುವ ವ್ಯಕ್ತಿತ್ವ ಹೊಂದಿರಬೇಕು.
ಪಾಠ ಭೋದನೆಯಲ್ಲಿನ ವಿಶೇಷ ಸಂದರ್ಭಗಳನ್ನು ಅರಿತು ಆಳವಾದ ಪ್ರಭುತ್ವ ಸಾಧಿಸಿ ಸಮಯಕ್ಕೆ ತಕ್ಕಂತೆ ಸುಧಾರಣೆಯಾಗುತ್ತ ಹೋಗಬೇಕು. ಶಿಕ್ಷಕರು ಕೂಡ ಜ್ಞಾನವನ್ನು ಪಡೆಯುವ ದಾಹಿಯಾಗಿರಬೇಕು ಎಂದರು.
ಶಿಕ್ಷಕರು ಅನುಕೂಲತೆಯನ್ನು ಕಲ್ಪಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು
ಎಂದು ಹೇಳಿದರು.
ಮಕ್ಕಳನ್ನು ನಾವು ನಮ್ಮ ಮನೆಯ ಮಕ್ಕಳಿಗಿಂತ ಹೆಚ್ಚಿನ ಪ್ರೀತಿ ತೋರಿ ಅವರ ಮಟ್ಟಕ್ಕೆ ಇಳಿದು ಪಾಠಬೋಧನೆ ಮಾಡಬೇಕಿದೆ. ಸಹನೆ ಮತ್ತು ಕ್ಷಮಾ ಗುಣಗಳನ್ನು ಅಳವಡಿಸಿಕೊಂಡು ಮಕ್ಕಳ ಮನೋಸ್ಥಿತಿ ಅರಿತು ನಾವು ಅವರೊಂದಿಗೆ ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕೀಯ ಭಾಷಣ ಮಾಡಿದ ಉಪ ಪ್ರಾಚಾರ್ಯ
ಎಸ್. ಆರ್. ಗದಗ,
ಹಿಂದಿನ ಮತ್ತು ಇಂದಿನ ಶಿಕ್ಷಣಕ್ಕೆ ಅಜಗಜಾಂತರವಿದೆ. ವಿವಿಧ ಮಾಧ್ಯಮಗಳ ಪರಿಸರದಿಂದ ಶಿಕ್ಷಣ ವ್ಯಾಪಕವಾಗಿ ಹರಡಿಕೊಂಡಿದೆ. ಸತತ ಅಧ್ಯಯನ ಶಿಕ್ಷಕರಿಗೆ ಬೇಕಿದೆ ಅಂದಾಗ ಅದು ಪರಿಪೂರ್ಣತೆ ಹೊಂದಲು ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯ ರವಿ ಪಾಟೀಲ, ಸಿ.ಪಿ.ದೇವಋಷಿ, ಆರ್.ಎಂ. ಮಗದುಮ್ಮ ಹಾಜರಿದ್ದರು. ಕಾವೇರಿ ಪಟ್ಟಣ ಅನಿಸಿಕೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು.