ಮಂಗಳೂರು: ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉಚಿತ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿದ ನಂತರ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಕಾನೂನು ಹೋರಾಟ ಮಾಡಲು ಮುಖ್ಯಮಂತ್ರಿಗೆ ಅವಕಾಶ ಇದೆ. ಆದರೆ, ಸಾರ್ವಜನಿಕರ ದೃಷ್ಟಿಯಲ್ಲಿ ರಾಜೀನಾಮೆ ನೀಡುವುದು ಸರಿ ಸಿದ್ದರಾಮಯ್ಯ ಅವರು ನಾನೇನು ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ, ಈಗ ಆರೋಪಗಳಿಗೆ ಸಂಬಂಧಿಸಿದ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದ ತನಿಖೆ ಮಾಡುವ ಏಜೆನ್ಸಿ ಯಾವ ನಿರ್ಣಯಕ್ಕೆ ಬರುತ್ತವೆ ಎಂಬುದರ ಮೇಲೆ ಪ್ರಕರಣ ಅಂತ್ಯವಾಗುತ್ತದೆ. ಅದು ಅನಂತರದ ವಿಷಯ. ಆದರೆ, ಸದ್ಯ ಗಂಭೀರ ಆರೋಪ ಬಂದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳಿತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರೈಲ್ವೆ ಸಚಿವರಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ, ರೈಲು ಅಪಘಾತ ಆಗಿದ್ದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗ ಆ ರೀತಿಯ ಪ್ರವೃತ್ತಿ ಕಾಣಲು ಸಿಗುವುದಿಲ್ಲ. ಈಗ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎನ್ನುವುದು ಅವರಿಗೆ ಮತ್ತು ಅಧಿಕಾರಿಗಳಿಗೆ ಬಿಟ್ಟದ್ದು. ಗಂಭೀರವಾದ ಆರೋಪಗಳಿರುವಾಗ ರಾಜೀನಾಮೆ ಕೊಡಬೇಕು. ಕೊಡದೆ ಹೋದರೆ ಕಾನೂನಿನಲ್ಲಿ ಯಾವ ತಪ್ಪಿಲ್ಲ. ಆದರೆ, ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ತಪ್ಪು ಅನಿಸಿದಾಗ ರಾಜೀನಾಮೆ ಕೊಡಬೇಕು ಎಂದು ಹೇಳುತ್ತೇನೆ ಎಂದರು.
ಈಗ ಹೈಕೋರ್ಟ್ ತನಿಖೆಗೆ ಅನುಮತಿ ಕೊಟ್ಟಿದ್ದು ಮುಡಾ ಸೈಟ್ ವಿಚಾರದಲ್ಲಿ ಮಾತ್ರ. ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ನನಗೆ ಅನ್ನಿಸುತ್ತಾ ಇದೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ಕೊಡಬೇಕು. ಈಗ ತನಿಖಾ ಸಮಿತಿ ಮಾಡುವುದು ಸರಕಾರಕ್ಕೆ ಬಿಟ್ಟ ವಿಚಾರ. ತನಿಕಾ ಸಮಿತಿ ವಿಚಾರಣೆ ಮಾಡಬಹುದು. ಆದರೆ, ಅವರು ಆರೋಪಿ ಅಲ್ಲ ಎಂದು ತೀರ್ಪು ಬಂದರೆ ಮತ್ತೆ ಹುದ್ದೆಗೆ ವಾಪಸ್ ಬರಬಹುದು. ಹೈಕೋರ್ಟ್ ತೀರ್ಪು ಬರುವ ಮೊದಲು ನಾನು ತಪ್ಪೇ ಮಾಡಿಲ್ಲ ಎಂದು ಹೇಳಿದರು. ಈಗ ಹೈಕೋರ್ಟ್ ಮೇಲ್ನೋಟಕ್ಕೆ ತಪ್ಪು ಕಂಡು ಬಂದಿದೆ ಎಂದು ಹೇಳಿದೆ. ಹೀಗಾಗಿ ಸದ್ಯ ಅವರು ಹೇಳಿದ್ದು ಸರಿ ಇಲ್ಲ ಅಂತ ಆಯ್ತಲ್ಲ. ಏನೋ ಸರಿಯಾಗದ ವಿಚಾರದ ಬಗ್ಗೆ ತನಿಖೆ ನಡೆಯಬೇಕು ಎಂದು ಹೇಳಿದರು.