ಬೆಳಗಾವಿ :
ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಆಕೆ ನೀಡಿದ ದೂರಿನಂತೆ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ನರಸಿಂಹರಾಜು ಜೆ.ಡಿ. ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಕರ್ತವ್ಯ ಲೋಪ, ಆಶಿಸ್ತು, ದುರ್ನಡತೆ ಕಾರಣ ನೀಡಿ ಪಿಎಸ್ ಐಅವರನ್ನು ಅಮಾನತು ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಸಂಕೇಶ್ವರ ಪೊಲೀಸ್ ಠಾಣೆಗೆ ಆಗಮಿಸಿದ್ದ ಮಹಿಳೆ ತನ್ನ ಪತಿಯ ವಿರುದ್ದ ದೂರು ನೀಡಿದ್ದರು. ಆದರೆ ಪಿಎಸ್ಐ ನರಸಿಂಹರಾಜು ಆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕ ಬೆಳೆಸಿ ಕರೆದುಕೊಂಡು ಸಂಚರಿಸಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ. ಪಿಎಸ್ ಐ ವಿರುದ್ಧ ಮಹಿಳೆ ಕೊನೆಗೂ ನ್ಯಾಯ ಕೊಡಿಸುವಂತೆ ಎಸ್ಪಿಗೆ ದೂರು ನೀಡಿದ್ದರು. ಮಹಿಳೆಯ ದೂರಿನ ವಿಚಾರಣೆ ನಡೆಸಿದ ಇದೀಗ ಪಿಎಸ್ಐ ನರಸಿರಾಜು ಅವರನ್ನು ಕರ್ತವ್ಯ ಲೋಪದಡಿ ಎಸ್ಪಿ ಅಮಾನತು ಮಾಡಿದ್ದಾರೆ.