ಇಟಗಿ :
ಮಕ್ಕಳಿಗೆ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳನ್ನು ತಿಳಿಸಿಕೊಡುವ ಗುರುತರ ಜವಾಬ್ದಾರಿ ನಮ್ಮ ತಾಯಿಂದಿರ ಮೇಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರೊಳ್ಳಿ-ಬೀಳಕಿಯ ಶ್ರೀ ರುದ್ರಸ್ವಾಮಿ ಮಠದ ಲಿಂಗೈಕ್ಯ ಶ್ರೀ ಶಾಂಡಿಲ್ಯ ಮಹಾಸ್ವಾಮೀಜಿಯವರ ಆರನೇ ಪುಣ್ಯಾರಾಧನೆ ಅಂಗವಾಗಿ ಯುವಕರಿಗಾಗಿ ನಡೆದ ಸನಾತನ ಸಂಸ್ಕೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇವು ಮುಂದಿನ ಜನಾಂಗಕ್ಕೆ ಸಾಗಬೇಕಾಗಿದೆ. ಖಾನಾಪುರ ತಾಲೂಕ ಹಿಂದೂಳಿದು ಮೂಲಭೂತ ಸೌಲಭ್ಯ ವಂಚಿತರಾಗಿ ಕಷ್ಟ ಅನುಭವಿಸುತ್ತಿದ್ದರು. ಇಲ್ಲಿಯವರ ಹೃದಯ ಶ್ರೀಮಂತ ಮೆಚ್ಚುವಂತದ್ದು. ಶ್ರೀ ರುದ್ರಸ್ವಾಮಿ ಮಠ ೧೯೨೬ ರಿಂದ ಭಾಷಾತೀತ ಮತ್ತು ಜಾತ್ಯಾತೀತವಾಗಿ ಬಂದಿರುವುದು ಮತ್ತು ಈಗಿನ ಪೀಠಾದಿಪತಿ ಅವರ ಸಾಮಾಜಿಕ ಕಳಕಳಿ ಮಾದರಿಯಾಗಿದೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಗೋಶಾಲೆ ಕಟ್ಟಡದ ಶಿಲಾನ್ಯಾಸ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಜಾತಿಯ ಹೆಸರಲ್ಲಿ ಬಡಿದಾಡುವ ಬದಲು ಮನುಷ್ಯತ್ವ ತತ್ವದಿಂದ ಬಾಳೋಣ. ಖಾನಾಪುರ ತಾಲೂಕಿಗೆ ಉಚಿತವಾಗಿ ವಾರದಲ್ಲಿ ಒಂದು ದಿನ ವೈಧ್ಯಕೀಯ ಸೇವೆ ಒದಗಿಸುವ ಭರವಸೆ ನೀಡಿದರು.
ಮಾಜಿ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ. ಬಿ.ಆರ್.ಡಿ.ಎ ಆಯುಕ್ತ ಗಿರೀಶ ಹೊಸೂರ, ಮಾಜಿ ಶಾಸಕ ಅರವಿಂದ ಪಾಟೀಲ, ವಿಠ್ಠಲ ಹಲಗೇಕರ, ಸುಭಾಷ ಗುಳಶೆಟ್ಟಿ, ಪ್ರಮೋದ ಕೋಚೇರಿ, ಸಂಜಯ ಕುಬಲ, ಡಾ.ರವಿ ಪಾಟೀಲ ಮಾತನಾಡಿದರು.
ಭೂತರಾಮಹಟ್ಟಿಯ ಶ್ರೀ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ತೆಲಂಗಾಣದ ಶ್ರೀ ಪಂಚಮ ಸಿದ್ಧಲಿಂಗ ಮಹಾಸ್ವಾಮೀಜಿ, ಹಿರೇಮುನವಳ್ಳಿಯ ಶ್ರೀ ಶಂಭುಲಿಂಗಶಿವಾಚಾರ್ಯ ಶ್ರೀಗಳು, ಶ್ರೀ ರುದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಚೆನ್ನಬಸವ ದೇವರು, ಬೆಳ್ಳುಬ್ಬಿ, ಶ್ರೀಕಾಂತ ಇಟಗಿ, ಸುಂದರ ಕುಲಕರ್ಣಿ, ಬಸವರಾಜ ಸಾಣಿಕೊಪ್ಪ, ಶಂಕರ ಹೊಳಿ, ಜ್ಯೋತಿಬಾ ರೇಮಾಣಿ ಹಾಗೂ ಇತರರು ಉಪಸ್ಥಿತರಿದ್ದರು.
ವಿವೇಕ ಕುರಗುಂದ ನಿರೂಪಿಸಿದರು. ಬಿಷ್ಠಪ್ಪ ಬನೋಶಿ ವಂದಿಸಿದರು.