ಬೆಳಗಾವಿ: ಅನಗೋಳ ನಾಕಾ ಬಳಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ರವಿವಾರ ನೆರವೇರಿದೆ.
ಮೇಯರ್ ಸವಿತಾ ಕಾಂಬಳೆ ಅವರ ಸಮ್ಮುಖದಲ್ಲಿ ಪ್ರತಿಮೆ ಮೇಲಿನ ಬಟ್ಟೆ ತೆರವುಗೊಳಿಸಲಾಯಿತು. ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಅವರು ಸಂಭಾಜಿ ಮಹಾರಾಜರ ಪ್ರತಿಮೆ ಮೇಲಿನ ಪರದೇ ತೆರೆಯದಂತೆ ತಿಳಿಸಿದರು. ಆಗ ಸಿಟ್ಟಿಗೆದ್ದ ಮೇಯರ್ ಸವಿತಾ ಅವರು, ನೀವು ಪ್ರತಿಮೆ ಅನಾವರಣ ಮಾಡುವುದನ್ನು ತಡೆಯುತ್ತೀರಾ ಎಂದು ಕೆರಳಿದರು. ಈ ನಡುವೆ ಮೇಯರ್ ಪ್ರತಿಮೆ ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣ ಸಂದರ್ಭದಲ್ಲಿ ಶಾಸಕ ಅಭಯ ಪಾಟೀಲ ಹಾಗೂ ಶ್ರೀರಾಮ ಸೇನೆ ಹಿಂದುಸ್ತಾನ ಸಂಘಟನೆಯ ಮುಖ್ಯಸ್ಥ ರಮಾಕಾಂತ ಕೊಂಡುಸ್ಕರ್ ಅವರ ಬೆಂಬಲಿಗರು ಸ್ಥಳದಲ್ಲಿ ಬೀಡುಬಿಟ್ಟಿದ್ದರಿಂದ ತುಸು ಉದ್ವಿಗ್ನ ವಾತಾವರಣ ಉಂಟಾಗಿತ್ತು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.