ಬೆಳಗಾವಿ :
ಬೆಳಗಾವಿಯ ಶಿವ ಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ವತಿಯಿಂದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಭಾವಪೂರ್ಣ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ನ್ಯಾಯವಾದಿ ಎಂ.ಬಿ. ಜಿರಲಿ ಅವರು ಗುರುದೇವ ರಾನಡೆ ಅವರ ಬಗ್ಗೆ ಸಿದ್ಧೇಶ್ವರ ಶ್ರೀಗಳು
ಅಪಾರ ಗೌರವ ಹೊಂದಿದ್ದರು. ಅವರ ಪುಸ್ತಕ ಪ್ರೀತಿ ಅದ್ಭುತ ವಾಗಿತ್ತು ಎಂದರು.
ಎಂ.ಆರ್.ಕರಡಿಗುದ್ದಿ ಅವರು ಸಿದ್ಧೇಶ್ವರ ಶ್ರೀಗಳು ಆಸೆಯನ್ನು ಗೆದ್ದ ಆಚರಣ ಶುದ್ಧ ಶಿವಯೋಗಿಗಳಾಗಿದ್ದರು ಎಂದರು. ಎಂ.ಜಯಶ್ರೀ ಅವರು ಶ್ರೀ ಗಳನ್ನು ಕಳೆದುಕೊಂಡ ನಮಗೆ ನಮ್ಮ ಮನೆಯಲ್ಲಿಯ ಓರ್ವ ತಂದೆಯನ್ನು ಕಳೆದುಕೊಂಡ ಅನುಭವ ಆಗುತ್ತಿದೆ. ಅಂತಹ ಆಪ್ತ ಭಾವನೆಗೆ ಕಾರಣರಾದ ಪೂಜ್ಯರು ಸರಳ ಸಜ್ಜನಿಕೆಯ ಮಹಾತ್ಮರಾಗಿದ್ದರು ಎಂದರು.
ಪೂಜ್ಯ ರಾಚಯ್ಯ ಸ್ವಾಮಿಗಳು ಮಾತನಾಡಿ, ಶ್ರೀಗಳು ಜೀವನ್ಮುಕ್ತರು, ಅಭೇದಾತ್ಮರು ಮತ್ತು ಪ್ರೇಮ ಸ್ವರೂಪ ರು.ಎಲ್ಲರಲ್ಲಿಯೂ ಶಿವನನ್ನು ಕಂಡು ಕೈ ಮುಗಿದ ಮಹಾತ್ಮರಾಗಿದ್ದರು. ಅವರ ಜೀವನ ನಮಗೆ ದಾರಿದೀಪ ಎಂದರು.
ಆಶಾ ಯಮಕನಮರಡಿ, ಜಯಶ್ರೀ ನಿರಾಕಾರಿ, ವಿದ್ಯಾ ಹುಂಡೇಕಾರ ಶ್ರೀಗಳ ಕುರಿತು ಬರೆದ ಕವನಗಳು ಹಾಡಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ,ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಅಧ್ಯಕ್ಷೆ ರತ್ನ ಪ್ರಭಾ ಬೆಲ್ಲದ , ಡಾ. ಎಫ್. ವಿ.ಮಾನ್ವಿ, ಡಾ. ರಾಜಶೇಖರ್, ರಮೇಶ್ ಕಳಸಣ್ಣವರ, ಜ್ಯೋತಿ ಭಾವಿಕಟ್ಟಿ, ವಿರೂಪಾಕ್ಷ ದೊಡಮನಿ,ಚಂದ್ರ ಶೇಖರ್ ಬೆಂಬಳಗಿ, ಡಾ. ರವಿ ಪಾಟೀಲ,ಭಾರತಿ ಸಂಕಣ್ಣವರ,ಮಹಾನಂದ ಕರಲಿಂಗನ್ನವರ, ಶೈಲಜಾ ಸಂಸುದ್ದಿ, ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ.ಗುರುದೇವಿ ಹುಲೆಪ್ಪನವರಮಠ ನಿರೂಪಿಸಿದರು.