ಬೆಳಗಾವಿ :
ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಹೃದಯ ಸಾಹಿತ್ಯ ಪ್ರತಿಷ್ಠಾನ ಸಹಯೋಗಗಳೊಂದಿಗೆ ಜೂ.18 ರಂದು ಬೆಳಗ್ಗೆ 10 ಗಂಟೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಧ್ಯಕ್ಷತೆಯನ್ನು ಲೇಖಕ ಎಲ್. ಎಸ್. ಶಾಸ್ತ್ರಿ ವಹಿಸಲಿದ್ದಾರೆ. ಕೃತಿಗಳ ಕುರಿತು ಆರ್.ಪಿ.ಡಿ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಬಿ. ಕೋಲಕಾರ ಮಾತನಾಡಲಿದ್ದಾರೆ. ಡಾ. ರತ್ನಾಕರ ಸಿ. ಹಾಗೂ ಮಹಾದೇವ ಎಸ್. ಪಾಟೀಲ ಇವರು ಸಹೃದಯ ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದು ಪ್ರಶಸ್ತಿ ಪ್ರದಾನವನ್ನು ಗಜಲ್ ಕವಿಗಳಾದ ಅಲ್ಲಾಗಿರಿರಾಜ ಮಾಡಲಿದ್ದಾರೆ. ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಜಿ. ರಾಮಯ್ಯ, ಮುನವಳ್ಳಿ ಅರ್ಬನ್ ಬ್ಯಾಂಕ್ ಯರಗಟ್ಟಿ ಶಾಖೆ ವ್ಯವಸ್ಥಾಪಕ ಶಿವಾನಂದ ಬಿ. ಮದ್ದಾನಿ ಆಗಮಿಸಲಿದ್ದಾರೆ. ಹಾಶೀಮ ಎ. ತಾಹಶೀಲದಾರ ಅವರನ್ನು ಸನ್ಮಾನಿಸಲಾಗುವುದು. ಸಹೃದಯ ಸಾಹಿತ್ಯ ಪ್ರತಿಷ್ಠಾನ ಸವದತ್ತಿಯ ಅಧ್ಯಕ್ಷ ನಾಗೇಶ ಜೆ. ನಾಯಕ ಉಪಸ್ಥಿತರಿರುವರು.
ಕವಿಗೋಷ್ಠಿಯಲ್ಲಿ ನದೀಮ್ ಸನದಿ, ನೀರಜಾ ಗಣಾಚಾರಿ, ಶಿವಾನಂದ ಉಳ್ಳಿಗೇರಿ, ಮಂಜುಳಾ ಶೆಟ್ಟರ, ಶೇಖರ ಹಾದಿಮನಿ, ರಾಜೇಶ್ವರಿ ಹಿರೇಮಠ, ಕಿರಣ ಗಣಾಚಾರಿ, ಸೌಮ್ಯ ಕೋಟಗಿ, ಸುಖದೇವಾನಂದ ಚವತ್ರಿಮಠ, ಬಸವರಾಜ ಹೊನಗೌಡರ್, ಮಮತಾ ಶಂಕರ, ಎಂ.ಡಿ. ಬಾವಾಖಾನ, ಜ್ಯೋತಿ ಮಾಳಿ, ಶ್ರೀಶೈಲ್ ಹುಬ್ಬಳ್ಳಿ, ಅನಸೂಯಾ ಮೆಟ್ಯಾಲ ದೀಪಕ ಶಿಂಧೆ, ರೇಣುಕಾ ಕಠಾರಿ, ಶಿವಾನಂದ ಬಾಗಾಯಿ, ಎಂ.ಬಿ. ಜ್ಞಾನೇಶ್ವರ, ಸಂತೋಷ ನಿಂಗರೆಡ್ಡಿ, ಆನಂದ ಪಾಟೀಲ, ನೀಲಾ ಕೆ. ಮಾಲಾ ಅಕ್ಕಿಶೆಟ್ಟಿ, ರತ್ನಾ ಗಂಗಾಧರ ಕಿಡೆನ್ನವರ ಕವಿತೆ ವಾಚನ ಮಾಡಲಿದ್ದಾರೆ.