ಶಬರಿಮಲೆ:
ದೇವರ ನಾಡು ಕೇರಳದಲ್ಲಿನ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ದಿನವಾದ ಇಂದು ಪ್ರತಿ ವರ್ಷದಂತೆ ಈ ವರ್ಷವೂ ಮಕರ ಜ್ಯೋತಿ ದರ್ಶನವಾಗಿದೆ. ಶಬರಿ ಮಲೆಯಿಂದ 4 ಕಿಲೋಮೀಟರ್ ದೂರದಲ್ಲಿನ ಪೊನ್ನಂಬಲಮೇಡುವಿನಲ್ಲಿ, ಸಂಜೆ 6.35ಕ್ಕೆ ಮಕರ ಜ್ಯೋತಿಯ ದರ್ಶನವನ್ನು ಅಯ್ಯಪ್ಪನ ಭಕ್ತರು ಕಣ್ತುಂಬಿಕೊಂಡರು.
ಶಬರಿಮಲೆ :
ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಸಂಭವಿಸುವ ಮಕರಜ್ಯೋತಿಯನ್ನು (ಮಕರವಿಳಕ್ಕು) ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು
ಸಂಜೆ 6.50ರ ಸುಮಾರಿಗೆ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು.
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಶನಿವಾರ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ–ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಕರಜ್ಯೋತಿ ದರ್ಶನದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಮಕರಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡರು.