ಬೆಳಗಾವಿ : ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ದೇವಲಾಪುರ ಗ್ರಾಮದ ಸರಕಾರಿ ಕಂಪೋಸಿಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರೂಪಾ ಚನ್ನಗೌಡ ಪಾಟೀಲ 625ಕ್ಕೆ 625 ಅಂಕ ಗಳಿಸುವ ಮೂಲಕ ಕೀರ್ತಿ ತಂದಿದ್ದಾಳೆ. ರಾಜ್ಯದಲ್ಲಿ ಒಟ್ಟು 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಯುವ ಮೂಲಕ ಈ ಬಾರಿ ಸಾಧನೆ ಮಾಡಿದ್ದು, ರೂಪಾ ಈ ಸಾಧನೆ ಮಾಡುವ ಮೂಲಕ ಜಿಲ್ಲೆಯ ಗರಿಮೆ ಹೆಚ್ಚಿಸಿದ್ದಾಳೆ.