ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಖಾನಾಪುರ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರ ಧರ್ಮಪತ್ನಿ ರುಕ್ಮಿಣಿ ವಿಠ್ಠಲರಾವ್ ಹಲಗೇಕರ ಅವರು ಭೇಟಿಯಾದರು.
ಕರ್ನಾಟಕ ರಾಜ್ಯದ ಅಂಗನವಾಡಿ ಕಾರ್ಯಕರ್ತಯರ ಕನಿಷ್ಠ ವೇತನ ನೀಡುವ ಕುರಿತು, ಪೇಸ್ ರೀಡಿಂಗ್ ಸಿಸ್ಟಮ್ ರದ್ದು ಪಡಿಸುವ ಕುರಿತು, ಹಳೆಯ ಅಂಗನವಾಡಿಗಳಲ್ಲಿ ಕಡಿಮೆ ಸಂಖ್ಯೆ ವಿದ್ಯಾರ್ಥಿಗಳು ಇರುವ ಕೇಂಧ್ರಗಳನ್ನು ರದ್ದುಪಡಿಸದೇ ಸ್ಥಳಾಂತರಿಸಿ ಮುಂದುವರಿಸುವುದು ಹಾಗೂ ಮರಾಠಿ ಶಿಕ್ಷಣ ಹೊಂದಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಬಡ್ತಿ ನೀಡಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವುದು ಹೀಗೆ ಹಲವಾರು ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ಮಾಡಿ ಮನವಿ ಸಲ್ಲಿಸಲಾಯಿತು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಮನವಿಗೆ ಸ್ಪಂದಿಸಿ ಸಚಿವರು ಈ ಸಮಸ್ಯೆಗಳ ಕುರಿತು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.