ಬೆಳಗಾವಿ :
ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶೀಯ ಹಾಗೂ ಕನ್ನಡನಾಡಿನ ಶ್ರೀಮಂತ ಕಲೆ-ಸಂಸ್ಕೃತಿಗಳನ್ನು ಬೆಳೆಸಬೇಕು. ನಾಡಿನ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯ ಇಂದು ನಡೆಯಬೇಕು ಎಂದು ಬಿಜೆಪಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ರುದ್ರಣ್ಣ ಚಂದರಗಿ ಹೇಳಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಮತ್ತು ಶ್ರೀಲಕ್ಷ್ಮೀ ಕಲ್ಚರಲ್-ಸೋಶಿಯಲ್ ವೆಲ್ಫೇರ್ ಅಸೋಸಿಯೇಶನ್ ಇವರ ಸಹಯೋಗದಲ್ಲಿ ಟಿವಿ ಸೆಂಟರ್ ಯೋಗಾಸನ ಭವನ ಗಣಪತಿ ಮಂದಿರದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕನ್ನಡ ನಾಡಿನ ಶ್ರೀಮಂತ ಕಲೆಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಕಾರ್ಯ ಇಂದು ಹೆಚ್ಚು ಹೆಚ್ಚು ನಡೆಯಬೇಕು ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಸಂದೀಪ ಜಿರಗ್ಯಾಳ, ಮಲ್ಲಿಕಾರ್ಜುನ ಸತ್ತಿಗೇರಿ, ಮಾರುತಿ ಕಣಬರ್ಗಿ, ಸಿ.ಎಂ. ಪಾಗದ, ಸುನಿಲ ಹಲವಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾನಪದ ಗೀತೆ, ಕನ್ನಡ ಹಾಡುಗಳು, ಸಮೂಹ ನೃತ್ಯ, ಸೋಬಾನೆ ಪದಗಳು, ವಿಚಾರ ಸಂಕಿರಣ, ಭರತನಾಟ್ಯ ಮುಂತಾದ ಕಾರ್ಯಕ್ರಮ ನಡೆಯಿತು.