ಸವದತ್ತಿ :
ರುದ್ರಣ್ಣ ಚಂದರಗಿ ಕ್ರಿಕೆಟ್ ಟ್ರೋಫಿ ಹಾಗೂ ಬಸವೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಸವದತ್ತಿ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ರುದ್ರಣ್ಣ ಚಂದರಗಿ ಕ್ರಿಕೆಟ್ ಟ್ರೋಫಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪಂದ್ಯಾವಳಿಯಲ್ಲಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ 40 ಹಳ್ಳಿಗಳ 40 ತಂಡಗಳು ಭಾಗವಹಿಸಿದ್ದವು. ಮೊದಲ ಮೂರು ಸ್ಥಾನ ಪಡೆದ ತಂಡಗಳಿಗೆ ಬಿಜೆಪಿ ನಾಯಕ ರುದ್ರಣ್ಣ ಚಂದರಗಿ ಅವರು ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಸೋಲು- ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ. ಇಂತಹ ಪಂದ್ಯಾವಳಿಗಳು ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ. ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸತ್ತಿಗೇರಿಯ ತ್ರಿಸ್ಟಾರ್ ಕ್ರಿಕೆಟ್ ಕ್ಲಬ್(ಪ್ರಥಮ), ಟಿಪ್ಪು ಟೈಗರ್ಸ್ ಕ್ಲಬ್ (ದ್ವಿತೀಯ), ಮುಗಳಿಹಾಳ ಜಿಮ್ ಬಾಯ್ಸ್ ಕ್ರಿಕೆಟ್ ಕ್ಲಬ್(ತೃತೀಯ) ಸ್ಥಾನ ಪಡೆದರು.