ಬೆಳಗಾವಿ :
ಪಂಚಮಸಾಲಿ ಲಿಂಗಾಯತ ಸಮಾಜದವರು ಗುರುವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಮುಖ ಮಾರ್ಗದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಸುವರ್ಣ ವಿಧಾನ ಸೌಧದಲ್ಲಿ ಕರ್ನಾಟಕ ಸರ್ಕಾರದ ವಿಧಾನ ಮಂಡಲದ ಚಳಗಾಲದ ಅಧಿವೇಶನ ಪ್ರಾರಂಭವಾಗಿದ್ದು , ದಿನಾಂಕ 22/12/2022 ರಂದು ಅಂಗಾಯತ ಸಮಾಜದವರು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿರುತ್ತಾರೆ .
ಆ ಕಾಲಕ್ಕೆ ಸುಮಾರು 4-5 ಲಕ್ಷ ಜನರು ಹಿರೇಬಾಗೇವಾಡಿಯಿಂದ ಬಸ್ತವಾಡ ಸಮಾವೇಶ ಸ್ಥಳದವರೆಗೆ ಪಾದಯಾತ್ರೆ ಮೂಲಕ ಬೆಳಗಾವಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬರುವವರಿದ್ದು, ಆ ಕಾಲಕ್ಕೆ ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ .
1. ಬೆಳಗಾವಿಯಿಂದ ಹಿರೇಬಾಗೇವಾಡಿ ಮಾರ್ಗವಾಗಿ ಧಾರವಾಡ ಕಡೆಗೆ ಹೋಗುವ ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ -48 ರ ಎಡಬದಿಯ ರಸ್ತೆಯನ್ನು ಉಪಯೋಗಿಸತಕ್ಕದ್ದು .
2. ಬೆಳಗಾವಿಯಿಂದ ಧಾರವಾಡ ಕಡೆಗೆ ಹೋಗುವ ಭಾರಿ ವಾಹನಗಳ ಸಂಚಾರವನ್ನು ಬಾಗೇವಾಡಿ ಮಾರ್ಗವಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ . ಭಾರಿ ವಾಹನಗಳು ಬೆಳಗಾವಿಯಿಂದ ಸಾಂಬ್ರಾ – ನೇಸರಗಿ – ಬೈಲಹೊಂಗಲ ಕ್ರಾಸ್ – ಎಮ್.ಕೆ.ಹುಬ್ಬಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೋಗಿ ಸೇರುವುದು .
3. ಧಾರವಾಡ ಕಡೆಯಿಂದ ಬೆಳಗಾವಿಗೆ ಬರುವ ಲಘು ವಾಹನಗಳು ಬಾಗೇವಾಡಿ ಟೋಲ ನಾಕಾ ದಾಟಿದ ನಂತರ ಬಲಗಡೆಯ ರಸ್ತೆಗೆ ಹೋಗುವುದು. ಎಡಗಡೆಯ ರಸ್ತೆಯಲ್ಲಿ ಪಾದಯಾತ್ರೆ ಇರುವುದರಿಂದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ . ಬಲಗಡೆಯ ರಸ್ತೆಯನ್ನು ಕಿರ್ಲೋಸ್ಕರ್ ಶೋರೂಂ ವರೆಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ . ಈ ಮೇಲಿನಂತೆ ಹಿರೇಬಾಗೇವಾಡಿಯಿಂದ ಬೆಳಗಾವಿ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ -48 ರಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು , ಸಾರ್ವಜನಿಕರು ಬದಲಾದ ಮಾರ್ಗಗಳಲ್ಲಿ ಸಂಚರಿಸಿ ಸಹಕರಿಸಲು ಕೋರಲಾಗಿದೆ .