ಬೆಳಗಾವಿ : ರಾಮದುರ್ಗ ತಾಲ್ಲೂಕಿನ ತುರುನೂರು ಗ್ರಾಮದ ಪ್ಲಾಟ್ನಲ್ಲಿ ಒಂಟಿ ಮಹಿಳೆಯಿದ್ದ ಮನೆ ಹೊಕ್ಕ ಕಳ್ಳ ಕಣ್ಣಿಗೆ ಕಾರದ ಪುಡಿ ಎರಚಿ ಕೈಗೆ ಸಿಕ್ಕಿದ್ದನ್ನು ದರೋಡೆ ಮಾಡಿದ ಘಟನೆ ಬುಧವಾರ ಜರುಗಿದೆ. ತುರುನೂರು ಗ್ರಾಮದ ಸಿದ್ದಲಿಂಗೇಶ್ವರ ಕಾಲೋನಿಯ ನಿರ್ಮಲ ಶೇಖರಪ್ಪ ದಶಮನಿ (70) ಎಂಬ ಮಹಿಳೆಗೆ ಹೆಲೈಟ್ ಮತ್ತು ಕಪ್ಪು ಉಡುಪು ಧರಿಸಿದ್ದ ವ್ಯಕ್ತಿ ಜೀವ ಬೆದರಿಕೆ ಹಾಕಿ 30 ಗ್ರಾಂ ಚಿನ್ನದ ಸರ ದೋಚಿದ್ದಾನೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ರಾಮದುರ್ಗದ ಪೊಲೀಸರು ಪಂಚಾಯತಿಯ ಸಿಸಿಟಿವಿ ತಪಾಸಣೆ ಮಾಡಿದ್ದಾರೆ. ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ಪಿಎಸ್ಐ ಸುನಿಲಕುಮಾರ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾಮದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.