ಲಕ್ಷಾಂತರ ರೂ ಚಿನ್ನಾಭರಣ ಕದ್ದ ದರೋಡೆಕೋರರ ಬಂಧನ..!
ಎಪ್ರಿಲ್ನಲ್ಲಿ ನಡೆದ ಕಳ್ಳತವನ್ನು ಯಶಸ್ವಿಯಾಗಿ ಭೇದಿಸಿದ ನಿಪ್ಪಾಣಿ ಪೊಲೀಸರು..!
ಬೆಳಗಾವಿ: ಎಪ್ರಿಲ್ ತಿಂಗಳಿನಲ್ಲಿ (08/04/2022) ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದ ದೊಂಡಿರಾಮ ವಿಷ್ಣು ಕುಸಾಳೆ ಎಂಬುವ ಚಿನ್ನದ ವ್ಯಾಪಾರಿ ಸಾಯಂಕಾಲ ನಿಪ್ಪಾಣಿಯಿಂದ ವ್ಯಾಪಾರ ಮುಗಿಸಿಕೊಂಡು ತನ್ನ ಅಂಗಡಿಯಲ್ಲಿದ್ದ 5 ಲಕ್ಷ 40 ಸಾವಿರ ಕಿಮ್ಮತ್ತಿನ 75 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು 2.5 ಕೆ. ಜಿ. ತೂಕದ ಬೆಳ್ಳಿಯ ಆಭರಣಗಳನ್ನು ತೆಗೆದುಕೊಂಡು ಸ್ವಗ್ರಾಮ ಮಾಂಗೂರಕ್ಕೆ ಬೈಕ್ ಮೇಲಿಂದ ಹೊಗುತ್ತಿರುವಾಗ ಭೀವಶಿ ಗ್ರಾಮ ಹದ್ದಿನಲ್ಲಿ ಹಿಂದಿನಿಂದ ಯಾರೋ ಮೂರು ಜನ ಕಳ್ಳರು ಬೈಕ್ ಮೇಲೆ ಬಂದು ಅಡ್ಡಗಟ್ಟಿ ಕೆಳಗೆ ಕೆಡವಿ ಆತನ ಹತ್ತಿರ ಇದ್ದ ಚಿನ್ನದ ಮತ್ತು ಬೆಳ್ಳಿಯ ಆಭರಣಗ ಬ್ಯಾಗಗಳನ್ನು ಕಿತ್ತುಕೊಂಡು ದರೋಡೆ ಮಾಡಿದ್ದರು. ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮರುದಿನ (9-4-2022) ರಂದು19/2022 ಕಲಂ: 392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ ಹಾಗೂ ಎಡಿಎಸ್ಪಿ ನಂದಗಾವಿ, ಚಿಕ್ಕೋಡಿ ಡಿಎಸ್ಪಿ ಬಸವರಾಜ ಯಲಿಗಾರ ರವರ ಮಾರ್ಗದರ್ಶನದಲ್ಲಿ ಸಂಗಮೇಶ ವಿ. ಶಿವಯೋಗಿ ಸಿ.ಪಿ.ಐ. ನಿಪ್ಪಾಣಿ ರವರ ನೇತೃತ್ವದಲ್ಲಿ, ಅನಿಲ್ ಕುಂಬಾರ ಪಿ.ಎಸ್.ಐ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣಿ, ನಂದೀಶ ಪ್ರೋ.ಪಿ.ಎಸ್.ಐ., ಎ. ಜಿ. ತಹಸೀಲ್ದಾರ ಎಎಸ್ಐ, ಸಿಎಚ್ಸಿ-2525. ಶ್ರೀಶೈಲ ಗಳತಗಿ, ಸಿಎಚ್ಸಿ 1795. ಸಂಜಯ ಕಾಡಗೌಡರ, ಸಿಎಚ್ಸಿ-2535 ಗೋಪಾಲ ಬಡಿಗೇರ, ಸಿಎಚ್ಸಿ-2501 ಜಿ. ಟಿ. ಝರೆ, ಸಿಪಿಸಿ-2701 ಶೇಖರ ಅಸೋದೆ, ಸಿಪಿಸಿ-3876 ಎಮ್. ಎಫ್. ನದಾಫ, ಸಿಪಿಸಿ-3176 ರಾಘವೇಂದ್ರ ಮೇಲ್ಗಡೆ, ಸಿಪಿಸಿ-3488, ಪ್ರಶಾಂತ ಕುದರಿ, ಸಿಪಿಸಿ-3569 ಶಿವಾನಂದ ಸಾರವಾಡ. ಸಿಪಿಸಿ-3374 ವಿಠಲ ಉಗಾರೆ, ಸಿಪಿಸಿ-3189 ರಮೇಶ ಭೈರನ್ನವರ ರವರೊಂದಿಗೆ ತಂಡ ರಚಿಸಿಕೊಂಡು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಸಿಪಿಸಿ-3146 ಸಚೀನ ಪಾಟೀಲ್, ಸಿಪಿಸಿ-3145 ವಿನೋದ ಠಕ್ಕನ್ನವರ ಇವರ ಸಹಾಯದಿಂದ ಕಾರ್ಯಾಚರಣೆ ನಡೆಯಿಸಿ ಒಟ್ಟು 6 ಜನ ಡಖಾಯಿತಿ ಆರೋಪಿತರಲ್ಲಿ 04 ಜನ ಆರೋಪಿಗಳಾದ
೧.ಪ್ರದೀಪ ಅನೀಲ ಕಾಂಬಳೆ (25) ಬೇಡಕಿಹಾಳ
೨.ಅವಧೂತ ಭಾವುಸಾಹೇಬ ಕೋಳಿ (೨೫)
೩.ಅಕ್ಷಯ ಅಶೋಕ ಕೊಂಡಿಗೇರಿ (೨೯) ಮಾಂಗೂರ
೪.ಪಂಕಜ ಸಂಜು ಕೋಳಿ (೨೩) ಸದಲಗಾ ನಾಲ್ಕು ಜನ ಬಂಧಿತ ಆರೋಪಿಗಳು.
ಇವರಿಂದ ಒಟ್ಟು 75 ಗ್ರಾಂ ಚಿನ್ನದ ಆಭರಣಗಳನ್ನು, 2.5 ಕೆ.ಜಿ. ಬೆಳ್ಳಿಯ ಆಭರಣಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎರಡು ಮೋಟರ ಸೈಕಲಗಳು, ನಾಲ್ಕು ಮೋಬೈಲ್ಗಳು ಸೇರಿದಂತೆ ಒಟ್ಟು ರೂ. 6 ‘ಲಕ್ಷ 50 ಸಾವಿರ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡು ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ.
ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.