ಬೆಳಗಾವಿ :
ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾವಗೆ ಗ್ರಾಮದಿಂದ ಕರ್ಲೇ ಗ್ರಾಮದವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು ಮಾರುತಿ ಹುರಕಡ್ಲಿ, ಸಾತೇರಿ ಕಮತಿ, ಅಪ್ಪು ಪಾಟೀಲ, ಪರುಶರಾಮ ಶಹಾಪೂರಕರ್, ರಾಮಲಿಂಗ ಚಿಗರೆ, ಶಿಲ್ಪಾ ಕಮತಿ, ಮೋಹನ ರೆಡ್ಡಿ, ಸುಜಾತಾ ಕರ್ಲೇಕರ, ಮೇಘನಾ ಮೋಟೆಣಕಾರ, ಲಕ್ಷ್ಮೀ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.