ಧರ್ಮಸ್ಥಳ :
ಯಾವುದೇ ಚಲನ ಚಿತ್ರ ಹಿಟ್ ಆದಾಗ ವಿವಾದ ಸಹಜ . ಕಾಂತಾರ ಚಲನ ಚಿತ್ರದ ಹಾಡಿನ ವಿವಾದಕ್ಕೆ ಸಂಬಂಧಿಸಿ ಇದೀಗ
ನಾಯಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಕಾಂತಾರ ಚಲನಚಿತ್ರದ ವರಾಹ ರೂಪಂ ಹಾಡಿನ ಕುರಿತು
ಅವರು ಮಾತನಾಡಿದ್ದಾರೆ.
ಧರ್ಮಸ್ಥಳಕ್ಕೆ ಬುಧವಾರ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ದಂಪತಿಯ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ವರಾಹ ರೂಪಂ ನಮ್ಮ ಸಂಗೀತ ನಿರ್ದೇಶಕರು ಸ್ವಂತ ರಚಿಸಿದ ಹಾಡು. ಸಿನಿಮಾ ಹಿಟ್ ಆದಾಗ ಇಂಥ ಆರೋಪ ಬರುವುದು ಸಹಜ. ಈ ವಿವಾದಕ್ಕೆ ನಮ್ಮ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರು ಸೂಕ್ತ ಉತ್ತರ ನೀಡುತ್ತಾರೆ ಎಂದು ಅವರು ತಿಳಿಸಿದರು.
ಕಾಂತಾರ ಬಿಡುಗಡೆಗೆ ಮೊದಲು ಧರ್ಮಸ್ಥಳಕ್ಕೆ ಬಂದು ಆಶೀರ್ವಾದ ಪಡೆದುಕೊಂಡು ಹೋಗಿದ್ದೆ. ಟ್ರೇಲರ್ ಬಿಡುಗಡೆ ನಂತರ ಬಂದಿದ್ದೆ. ಸಿನಿಮಾ ಬಿಡುಗಡೆಯಾಗಿ ಫ್ಯಾನ್ ಇಂಡಿಯ ರೂಪದಲ್ಲಿ ಯಶಸ್ವಿಯಾಯಿತು. ಡಾ. ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತ ಚಲನಚಿತ್ರ ನೋಡಿದ ಸಂದರ್ಭದಲ್ಲೂ ಹೊರಗೆ ಇದ್ದೆ. ಭೇಟಿಯಾಗಲು ಆಗಲಿಲ್ಲ. ಇಂದು ಕಾಲಕೂಡಿ ಬಂದಿದ್ದರಿಂದ ಭೇಟಿಯಾಗುತ್ತಿದ್ದೇನೆ ಎಂದು ತಿಳಿಸಿದರು.
ಡಾ. ವೀರೇಂದ್ರ ಹೆಗ್ಗಡೆಯವರು ಚಲನ ಚಿತ್ರ ನೋಡಿರುವುದು ದೇವರೇ ಈ ಸಿನಿಮಾ ನೋಡಿದಷ್ಟು ಖುಷಿ ಯಾಯಿತು ಎಂದು ರಿಷಬ್ ಅವರ ಪತ್ನಿ ಪ್ರಗತಿ ಹೇಳಿದರು.
ಮುಂದಿನ 2ತಿಂಗಳು ಬಿಡುವಿನಲ್ಲಿ 1ತಿಂಗಳು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದು ಬಳಿಕ ವಿಶ್ರಾಂತಿ ಪಡೆಯುವುದಾಗಿ ಅವರು ತಿಳಿಸಿದರು.
ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.