This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ರೈತರು, ರೈತರ ಮಕ್ಕಳಿಗೆ ಬೋಟಿಂಗ್ ಕಯಾಕಿಂಗ್ ವ್ಯವಸ್ಥೆ ಮಾಡಿಕೊಟ್ಟ ಶ್ರೀಮಂತ ಪಾಟೀಲ Rich Patil arranged boating and kayaking for farmers and farmers' children


 

ಕಾಗವಾಡ :

ಈ ಭಾಗದ ಮಕ್ಕಳಿಗೆ ಇದೀಗ ದಿನ ಬೆಳಗಾಗುವುದೇ ತಡ. ದೋಣಿ ವಿಹಾರಕ್ಕೆ ಹೋಗಬೇಕೆಂಬ ತವಕ. ಜನಪ್ರತಿನಿಧಿಯೊಬ್ಬರು ಮಕ್ಕಳಿಗಾಗಿ ಇಂತಹ ವ್ಯವಸ್ಥೆ ಮಾಡಿಕೊಟ್ಟಿರುವುದು ನಿಜಕ್ಕೂ ಅಭಿನಂದನೀಯ.

ಬೋಟಿಂಗ್ ಮಾಡಬೇಕಾದರೆ ದಾಂಡೇಲಿ ಅಥವಾ ಗೋವಾ ರಾಜ್ಯಕ್ಕೆ ಹೋಗ್ಬೇಕಿಲ್ಲ. ಕಾಗವಾಡ ಮತ ಕ್ಷೇತ್ರಕ್ಕೆ ಬಂದ್ರೆ ಸಾಕು. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರೈತರು ಹಾಗೂ ರೈತರ ಮಕ್ಕಳಿಗೆ ಬೋಟಿಂಗ್ ಕಿಯಾಕಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ ಶ್ರೀಮಂತ ಪಾಟೀಲ ಫೌಂಡೇಶನ್. ಇದರಿಂದ ಈ ಭಾಗದ ಜನತೆ
ಹಾಗೂ ಮಕ್ಕಳು ಸಂತಸದ ಕ್ಷಣವನ್ನು ಅನುಭವಿಸುತ್ತಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ಮಾಜಿ ಸಚಿವ ಹಾಗೂ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಅವರು ರೈತರು ಮತ್ತು ರೈತರ ಮಕ್ಕಳಿಗೆ ಕಯಾಕಿಂಗ್ ವ್ಯವಸ್ಥೆ ಮಾಡಿಕೊಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕಯಾಕಿಂಗ್ ಬೋಟಿಂಗ್ ನಲ್ಲಿ ಇದೀಗ ಮಕ್ಕಳು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೂ ಬೋಟಿಂಗ್ ವಿಹಾರ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳು ಬೋಟಿಂಗ್ ನಲ್ಲಿ ಮಿಂದೆದ್ದು ಸವಿಯುಣ್ಣುತ್ತಿದ್ದಾರೆ.
ಸಂಬರಗಿ ಗ್ರಾಮದ ಅಗ್ರಾಣಿ ಹಳ್ಳದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಇದನ್ನು ಮಾಡಲಾಗಿದ್ದು ಬೋಟ್ ಗಳ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಶ್ರೀಮಂತ ಪಾಟೀಲ ಮಾಡಿರುವ ಈ ಬೋಟಿಂಗ್ ವ್ಯವಸ್ಥೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


Jana Jeevala
the authorJana Jeevala

Leave a Reply