ಕಾಗವಾಡ :
ಈ ಭಾಗದ ಮಕ್ಕಳಿಗೆ ಇದೀಗ ದಿನ ಬೆಳಗಾಗುವುದೇ ತಡ. ದೋಣಿ ವಿಹಾರಕ್ಕೆ ಹೋಗಬೇಕೆಂಬ ತವಕ. ಜನಪ್ರತಿನಿಧಿಯೊಬ್ಬರು ಮಕ್ಕಳಿಗಾಗಿ ಇಂತಹ ವ್ಯವಸ್ಥೆ ಮಾಡಿಕೊಟ್ಟಿರುವುದು ನಿಜಕ್ಕೂ ಅಭಿನಂದನೀಯ.
ಬೋಟಿಂಗ್ ಮಾಡಬೇಕಾದರೆ ದಾಂಡೇಲಿ ಅಥವಾ ಗೋವಾ ರಾಜ್ಯಕ್ಕೆ ಹೋಗ್ಬೇಕಿಲ್ಲ. ಕಾಗವಾಡ ಮತ ಕ್ಷೇತ್ರಕ್ಕೆ ಬಂದ್ರೆ ಸಾಕು. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರೈತರು ಹಾಗೂ ರೈತರ ಮಕ್ಕಳಿಗೆ ಬೋಟಿಂಗ್ ಕಿಯಾಕಿಂಗ್ ವ್ಯವಸ್ಥೆ ಮಾಡಿಕೊಟ್ಟಿದೆ ಶ್ರೀಮಂತ ಪಾಟೀಲ ಫೌಂಡೇಶನ್. ಇದರಿಂದ ಈ ಭಾಗದ ಜನತೆ
ಹಾಗೂ ಮಕ್ಕಳು ಸಂತಸದ ಕ್ಷಣವನ್ನು ಅನುಭವಿಸುತ್ತಿದ್ದಾರೆ.
ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ಮಾಜಿ ಸಚಿವ ಹಾಗೂ ಕಾಗವಾಡ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ ಅವರು ರೈತರು ಮತ್ತು ರೈತರ ಮಕ್ಕಳಿಗೆ ಕಯಾಕಿಂಗ್ ವ್ಯವಸ್ಥೆ ಮಾಡಿಕೊಡುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಕಯಾಕಿಂಗ್ ಬೋಟಿಂಗ್ ನಲ್ಲಿ ಇದೀಗ ಮಕ್ಕಳು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೂ ಬೋಟಿಂಗ್ ವಿಹಾರ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳು ಬೋಟಿಂಗ್ ನಲ್ಲಿ ಮಿಂದೆದ್ದು ಸವಿಯುಣ್ಣುತ್ತಿದ್ದಾರೆ.
ಸಂಬರಗಿ ಗ್ರಾಮದ ಅಗ್ರಾಣಿ ಹಳ್ಳದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಇದನ್ನು ಮಾಡಲಾಗಿದ್ದು ಬೋಟ್ ಗಳ ವ್ಯವಸ್ಥೆಯನ್ನು ಒದಗಿಸಲಾಗಿದೆ.
ಶ್ರೀಮಂತ ಪಾಟೀಲ ಮಾಡಿರುವ ಈ ಬೋಟಿಂಗ್ ವ್ಯವಸ್ಥೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.