ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಬಿಪಿಎಲ್ ಪಡಿತರ ಕಾರ್ಡುಗಳ ಪರಿಷ್ಕರಣೆ ಕಾರ್ಯ ನಡೆಯಲಿದೆ. ಬಿಪಿಎಲ್ ಕಾರ್ಡ್ ಆದಾಯ ತೆರಿಗೆ ಪಾವತಿದಾರರು, ಜಮೀನುದಾರರು, ಸರ್ಕಾರಿ ನೌಕರರು ಇದ್ದಾರೆ ಎಂದು ಹೇಳಿರುವ ಸರಕಾರ ಲಕ್ಷಾಂತರ ಪಡಿತರ ಚೀಟಿಗಳನ್ನು ಸರ್ಕಾರ ರದ್ದು ಮಾಡಿದೆ. ಈ ಸಂದರ್ಭದಲ್ಲಿ ಅರ್ಹರು ಸಹ ಬಿಪಿಎಲ್ ಕಾರ್ಡು ಕಳೆದುಕೊಳ್ಳುವಂತಾಗಿತ್ತು. ಈ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸಿದೆ. ಹೀಗಾಗಿ ಸರಕಾರ ಇದೀಗ ಬಿಪಿಎಲ್ ಕಾರ್ಡ್ ವಂಚಿತದಾರರಿಗೆ ಕಾರ್ಡ್ ನೀಡಲು ಭರವಸೆ ನೀಡಿದ್ದು, ಬಿಪಿಎಲ್ ಕಾರ್ಡ್ ಮರು ಪರಿಶೀಲನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ಅಂಥ ಕಾರ್ಡುಗಳ ಪರಿಷ್ಕರಣೆ ನಡೆಯಲಿದೆ.