ಬೆಳಗಾವಿ : ಹೈದರಾಬಾದಿನಿಂದ ಆಗಮಿಸಿದ್ದ ಪ್ರವಾಸಿಗರ ತಂಡ ಸೋಮವಾರ ದೂದಸಾಗರ ಜಲಪಾತದಲ್ಲಿ ಅವಘಡಕ್ಕೆ ಸಿಲುಕುವ ಸಾಧ್ಯತೆಯಿತ್ತು. ಕೊನೆಗೂ ಜೀವ ರಕ್ಷಕರು ಅವಘಡಕ್ಕೆ ತುತ್ತಾಗುತ್ತಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಲಪಾತದಲ್ಲಿ ಸ್ಥಾನಕ್ಕೆ ಮೂರು ವರ್ಷದ ಬಾಲಕಿ ನೀರಿಗೆ ಇಳಿದಿದ್ದಳು. ಕಲ್ಲಿನ ಮೇಲೆ ಕಾಲಿಟ್ಟ ಬಾಲಕಿ ನೀರಿಗೆ ಜಾರಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲಿದ್ದ ಜೀವ ರಕ್ಷಕರು ಆಗುತ್ತಿದ್ದ ಅಪಾಯವನ್ನು ಲೆಕ್ಕಿಸಿ ಕೂಡಲೇ ಬಾಲಕಿಯನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಬಾಲಕಿ ಈಗ ಆರೋಗ್ಯವಾಗಿದ್ದಾಳೆ.
ದೂದಸಾಗರ ಕರ್ನಾಟಕದ ಬೆಳಗಾವಿ ಹಾಗೂ ಗೋವಾ ರಾಜ್ಯದ ಗಡಿಭಾಗದಲ್ಲಿ ಇರುವ ನಯನ ಮನೋಹರ ಜಲಪಾತ ಇದಾಗಿದೆ. ಇಲ್ಲಿ ಪರ್ವತದ ಮೇಲಿನಿಂದ ಬೀಳುವ ಸುಂದರ ಜಲರಾಶಿಯ ವೀಕ್ಷಣೆಗೆ ಪ್ರತಿದಿನ ಅದರಲ್ಲೂ ಮಳೆಗಾಲದಲ್ಲಿ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಈ ವರ್ಷವೂ ಜೀವ ರಕ್ಷಕರು ಮತ್ತು ಆಡಳಿತ ಮನವಿ ಮಾಡಿದೆ.