ವಸೂಲಿ ತನಿಖೆ ಮಾಡುವುದನ್ನು ಬಿಟ್ಟು ಸುಳ್ಳು ಸುದ್ದಿ ಎಂದು ಪತ್ರಿಕೆ ಮೇಲೆ ಗೂಬೆ ಕೂರಿಸುತ್ತಿರುವುದೇಕೆ..?
ಜನಜೀವಾಳ ಸತ್ಯ ವರದಿಯನ್ನು ಮುಚ್ಚಿಹಾಕಲು ಹುನ್ನಾರ ನಡೆಯುತ್ತಿರುವ ಇಲಾಖೆ..!
ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮಕ್ಕೆ ಶುಕ್ರವಾರದಂದು ಬೆಳಗಾವಿಯಿಂದ ಬಂದ ರಿನೇಶ್ರೀ ಸೊಲುಶನ್ಸ್ ತಂಡ ಬೇಕರಿ ಅಂಗಡಿಗೆ ಬಂದು ನಮ್ಮ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ಏಕೆ ಮಾಡಲ್ಲಿಕ್ಕೆ ಹೇಳಿದ್ದೀರಿ ಎಂದು ಅಂಗಡಿಕಾರರಿಗೆ ಬೆದರಿಕೆ ಒಡ್ಡಿದರು. ಜತೆಗೆ ಜನಜೀವಾಳ ಪತ್ರಿಕೆ ವರದಿಗಾರರು ಯಾರು ಎಂದು ಧಮ್ಕಿ ಹಾಕಿದಾಗ ಗ್ರಾಮಸ್ಥರು, ರೈತ ಸಂಘಟನೆಯವರು ಇನ್ನು ಮುಂದೆ ಈ ಪುಟ್ಟ ಗ್ರಾಮದ ಅಂಗಡಿಗಳಿಗೆ ದಂಡ ಹಾಕುವುದಾಗಲಿ ಯಾವುದೇ ತರಹ ಅಧಿಕಾರಿಗಳು ಎಂದು ಹೇಳಿ ಅಂಗಡಿಗಳನ್ನು ಬಂದು ಮಾಡುವುದಾಗಿ ಇನ್ನು ಮುಂದೆ ಧಮ್ಕಿ ಹಾಕಿದರೆ ಗ್ರಾಮಸ್ಥರು ತಮಗೆ ಕಟ್ಟಿಹಾಕಿ ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದಾಗ 12 ಜನರ ತಂಡ 3 ಕಾರುಗಳಲ್ಲಿ ಮರಳಿ ಹೋಗಿದ್ದಾರೆ.
ಕಕ್ಕೇರಿ/ಬೆಳಗಾವಿ :ಖಾನಾಪುರ ತಾಲೂಕು ಕಕ್ಕೇರಿ ಗ್ರಾಮದ ಬೇಕರಿ ಹಾಗೂ ಅಂಗಡಿಗಳಿಗೆ ತೆರಳಿ ಫೋನ್ ಪೇ ಮೂಲಕ ಹಣ ವಸೂಲಿ ಕೊಂಡವರು ತಾವೇ ಎಂದು ರಿನೆಶ್ರೀ ಸೊಲುಶನ್ಸ್ ತಂಡ ಕೊನೆಗೂ ಒಪ್ಪಿಕೊಂಡಿದ್ದಾರೆ.
ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಿಗೆ ಶುಕ್ರವಾರ ಕಕ್ಕೇರಿ ಗ್ರಾಮಕ್ಕೆ ಮತ್ತೆ ತೆರಳಿದ್ದ ರಿನೆಶ್ರೀ ತಂಡ ಈ ವರದಿ ಪ್ರಕಟಿಸಿದ ಮಾಡಿದ ವರದಿಗಾರರು ಯಾರು ಎಂದು ಸುದ್ದಿಯ ಮೂಲವನ್ನೇ ಪ್ರಶ್ನಿಸಲು ಮುಂದಾಗಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿಸಿಕೊಂಡಿರುವ ಪತ್ರಿಕೋದ್ಯಮದ ಅಸ್ತಿತ್ವವನ್ನೇ ಪ್ರಶ್ನಿಸಲು ಮುಂದಾಗಿರುವುದಕ್ಕೆ ಮೇಲಿನ ಅಧಿಕಾರಿಗಳು ಉತ್ತರ ನೀಡಬೇಕಿದೆ.
ಕಕ್ಕೇರಿ ಗ್ರಾಮಕ್ಕೆ ಶುಕ್ರವಾರ ಮತ್ತೆ ತೆರಳಿದ ಈ ತಂಡ ಗ್ರಾಮಸ್ಥರು , ಅಂಗಡಿಕಾರರಿಗೆ ನಾನಾ ಪ್ರಶ್ನೆಗಳ ಸುರಿಮಳೆ ಹಾಕತೊಡಗಿದರು. ಒಟ್ಟಾರೆ ಅಧಿಕಾರಿಗಳಿಗೆ ತಾವು ಮಾಡಿದ್ದು ತಪ್ಪು ಎಣಿಸಲಿಲ್ಲ. ಸುದ್ದಿ ಪ್ರಕಟಣೆ ಮಾಡಿದ ವರದಿಗಾರ ಯಾರು ಎನ್ನುವುದೇ ಅವರಿಗೆ ಮುಖ್ಯವಾಗಿ ಬೇಕೆನಿಸುತ್ತಿತ್ತು. ಅಧಿಕಾರಿಗಳು ವರದಿಗಾರರ ಹೆಸರನ್ನು ಹೇಳುವಂತೆ ಒಂದೇ ಸಮನೆ ಪ್ರಶ್ನೆ ಮಾಡತೊಡಗಿದರು. ಇದರಿಂದ ಕೆರಳಿದ ಗ್ರಾಮಸ್ಥರು ಒಗ್ಗಟ್ಟಾಗಿ ಗುಂಪು ಗುಂಪು ಸೇರುತ್ತಲೇ, ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಕೊರೊನಾ ಕಾಲಿಟ್ಟ ನಂತರ ಜಗತ್ತಿನ ಇಡೀ ವ್ಯಾಪಾರಿ ವರ್ಗ ಕಂಗೆಟ್ಟಿದೆ. ವ್ಯಾಪಾರ ಇಲ್ಲದೆ ದಿನೇ ದಿನೇ ವ್ಯಾಪಾರ ವಹಿವಾಟು ಬಂದ್ ಮಾಡಿ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಿತ್ಯವೂ ವರದಿಯಾಗುತ್ತಿದೆ. ಆದರೆ, ಬೆಳಗಾವಿಯಿಂದ ದೂರದ ಖಾನಾಪುರ ತಾಲೂಕಿನ ಹಳ್ಳಿಗಳಿಗೆ ತೆರಳಿ ಬಡಪಾಯಿ ವ್ಯಾಪಾರಿಗಳ ಮೇಲೆ ದಂಡ ಇಲ್ಲವೇ ಹಣ ನೀಡುವಂತೆ ಒತ್ತಡ ಹೇರುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾನಾಪುರ ತಾಲೂಕಿನ ಕಕ್ಕೇರಿ, ಬೀಡಿ ಸೇರಿದಂತೆ ಇತರ ಗ್ರಾಮಗಳಲ್ಲಿ ಇತ್ತೀಚಿಗೆ ಅಧಿಕಾರಗಳ ಹೆಸರು ಹೇಳಿಕೊಂಡು ವಂಚಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹತ್ತು ದಿನಗಳ ಹಿಂದಷ್ಟೇ ಬೀಡಿಯಲ್ಲಿ ಹೋಟೆಲ್ಗೆ ತೆರಳಿದ್ದ ಕೆಲವರು ಹಣ ವಸೂಲಿ ಮಾಡಿಕೊಂಡೆ ವಾಪಸ್ ಆಗಿದ್ದರು. ಇದು ಖಾನಾಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಬೆನ್ನಿಗೆ ಇದೀಗ ಕಕ್ಕೇರಿ ಗ್ರಾಮದಲ್ಲಿ ಅಧಿಕಾರಿಗಳ ಹೆಸರು ಹೇಳಿಕೊಂಡು ಬಂದ ತಂಡ ಬೇಕರಿ ಹಾಗೂ ಅಂಗಡಿಕಾರದಿಂದ ಹಣ ವಸೂಲಿ ಮಾಡಿದ್ದಕ್ಕೆ ಗ್ರಾಮಸ್ಥರು ಇವರು ಸಹಾ ವಸೂಲಿಕೋರರೇ ಇರಬಹುದು ಎಂದು ಭಾವಿಸಿದ್ದರು. ಅಧಿಕಾರಿಗಳು ಆಗಿದ್ದರೆ ನಗದು ಸ್ವೀಕರಿಸುತ್ತಿದ್ದರು. ಆದರೆ, ಇವರು ಫೋನ್ ಪೇ ಮೂಲಕ ಹಣ ಪಡೆದುಕೊಂಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪತ್ರಿಕೆ ಸಂಬಂಧಿಸಿದ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸಿತು. ಸರಕಾರದ ಅಧಿಕಾರಿಗಳು ಯಾವುದೇ ಇಲಾಖೆಗಳು ಇಷ್ಟರವರೆಗೆ ಪೇಟಿಎಂ ಹಾಗೂ ಫೋನ್ ಪೇ ಮೂಲಕ ಹಣ ವಸೂಲಿ ಮಾಡಿದ ಉದಾಹರಣೆ ಇಲ್ಲ. ನಗದು ಮಾತ್ರ ಸ್ವೀಕರಿಸುತ್ತದೆ ಎಂದು ಸ್ಪಷ್ಟನೆ ನೀಡಿದರು.
ಆದರೆ, ಕಕ್ಕೇರಿಗೆ ಬಂದ ಇವರು ತಮಗೆ ಫೋನ್ ಪೇ ಮೂಲಕ ಹಣ ಸ್ವೀಕರಿಸಲು ಅವಕಾಶ ಇದೆ ಎಂದಿರುವ ಬಗ್ಗೆ ಮೇಲಿನ ಅಧಿಕಾರಿಗಳು ಸೂಕ್ತ ಗಮನಹರಿಸಬೇಕಾಗಿದೆ.
ವಸೂಲಿ ತನಿಖೆ ಮಾಡುವುದನ್ನು ಬಿಟ್ಟು ಸುಳ್ಳು ಸುದ್ದಿ ಎಂದು ಪತ್ರಿಕೆ ಮೇಲೆ ಗೂಬೆ ಕೂರಿಸುತ್ತಿರುವುದೇಕೆ..?; ಜನಜೀವಾಳ ಸತ್ಯ ವರದಿಯನ್ನು ಮುಚ್ಚಿಹಾಕಲು ಹುನ್ನಾರ ನಡೆಯುತ್ತಿರುವ ಇಲಾಖೆ..!ಖಾನಾಪುರ ಅಷ್ಟೇ ಅಲ್ಲದೆ ಹಲವು ಕಡೆ ಆಹಾರ ಇಲಾಖೆಯವರ ಹೆಸರು ಹೇಳಿಕೊಂಡು ಅಂಗಡಿ, ದಾಬಾ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರನ್ನು ಹೆದರಿಸಿ ಪುಕ್ಕಟೆ ಊಟ, ತಿಂಡಿ ತಿಂದಿಲ್ಲದೆ ಹಣ ವಸೂಲಿ ಮಾಡಿರುವ ಘಟನೆಗಳು ಹಾಗೂ ಆರೋಪಗಳು ವ್ಯಾಪಕವಾಗಿವೆ. ಇಂತಹ ಘಟನೆಗಳು
ಹಲವು ಬಾರಿ ಅಧಿಕಾರಿಗಳು, ಪತ್ರಿಕೆ ಹಾಗೂ ಸಮಾಜ ಸೇವಕರ ಗಮನಕ್ಕೆ ಬಂದಿವೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುತ್ತಾರೆ. ಅದಲ್ಲದೆ ಇದರ ಬಗ್ಗೆ ಪ್ರತ್ಯಕ್ಷ ಕಂಡು ವರದಿ ಮಾಡಿರುವ ಪತ್ರಿಕೆ ಮೇಲೆ ಸುಳ್ಳು ಸುದ್ದಿ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿರುವುದಕ್ಕೆ ಇದೀಗ ಪತ್ರಿಕೋದ್ಯಮ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಇಂತಹ ಪೊಳ್ಳು ಸ್ಪಷ್ಟನೆಗೆ ಜನಜೀವಾಳ ಯಾವತ್ತು ಮನೆ ಹಾಕುವುದಿಲ್ಲ. ಆಹಾರ ಇಲಾಖೆಯಲ್ಲಿ ಜನರಿಗೆ ಆಗುತ್ತಿರುವ ಮೋಸವನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ.