ಬೆಳಗಾವಿ: ಶಹಾಪುರ ಮಹಾತ್ಮ ಪುಲೆ ರಸ್ತೆಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜ.16ರಂದು ಸಂಜೆ 6 ಕ್ಕೆ ಧರ್ಮ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಯಡೂರು ಶ್ರೀಶೈಲ ಮಹಾ ಪೀಠದ
ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಭೂತರಾಮನಹಟ್ಟಿಯ ಶ್ರೀ ಶಿವಸಿದ್ಧ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. ನೂಲ ಸುರಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಇಳಕಲ್ ಕೊಡುರು ಶ್ರೀ ಅನ್ನದಾನ ಶಾಸ್ತ್ರಿಗಳು ಅವರು ಭದ್ರಕಾಳಿ ಸಮೇತ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ಹಾಗೂ ಶ್ರೀಶೈಲ ಜಗದ್ಗುರುಗಳ ಸಂಚಾರಿ ಧರ್ಮ ಜಾಗೃತಿಯ ವಿಷಯವಾಗಿ ಪ್ರವಚನ ನೀಡುವರು.


