ಬೆಳಗಾವಿ: ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತೆಗೆ ಚಿಕಿತ್ಸೆ ಪಡೆಯುತ್ತಿರುವ ಮನೇರಗಾ ಕಾರ್ಮಿಕರನ್ನು ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಯಮಕನಮರಡಿ ಕ್ಷೇತ್ರದ ಹಿಡಕಲ್ ಡ್ಯಾಂ ವ್ಯಾಪ್ತಿಯ ಕಾಮಗಾರಿಗೆ ಮನರೇಗಾ ಕಾರ್ಮಿಕರು ಟೆಂಪೂ ನಲ್ಲಿ ಹೋಗುವಾಗ ಅಪಘಾತ ಸಂಭಂವಿಸಿ 35 ಕ್ಕೂ ಅಧಿಕ ಜನ ಕಾರ್ಮಿಕರು ಜಿಲ್ಲಾಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ಮೇರೆಗೆ ಅವರ ಆಪ್ತ ಸಹಾಯಕ ಭೇಟಿ ನೀಡಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.
ಬಳಿಕ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸಚಿವರ ಆಪ್ತ ಸಹಾಯಕರಾದ ಕಿರಣ ರಜಪೂತ್ , ಮಲಗೌಡ ಪಾಟೀಲ ಅವರು ಸೂಚನೆ ನೀಡಿದರು.
ಗಾಯಾಳುಗಳಿಗೆ ತುರ್ತು ಚಿಕಿತ್ಸೆ, ಮೂಲಭೂತ ಸೌಲಭ್ಯ ಕಲ್ಪಿಸಲು ವೈದ್ಯರಿಗೆ ತಿಳಿಸಲಾಗಿದೆ. ಬೇಗ ಗುಣಮುಖರಾಗಲಿದ್ದು, ಆತಂಕಕ್ಕೆ ಒಳಪಡಬೇಕಿಲ್ಲ ಎಂದು ಗಾಯಾಳು ಕುಟುಂಬಸ್ಥರಿಗೆ ಸಚಿವರ ಆಪ್ತರು ತಿಳಿಸಿದರು.
ಈಗಾಗಲೇ ಸಚಿವರು ಪೊನ್ ಮೂಲಕ ಗಾಯಾಳುಗಳ ಆರೋಗ್ಯ ವಿಚಾರಿಸಿ ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ಸೌಕರ್ಯ, ಅಗತ್ಯ ಚಿಕಿತ್ಸೆ ದೊರಕಿಸುವಂತೆ ತಿಳಿಸಿದ್ದಾರೆ. ಸಚಿವರು ಕ್ಷಣ.. ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿದ್ದು, ಮತ್ತು ಸಚಿವರ ಆಪ್ತರ ತಂಡ ಜಿಲ್ಲಾಸ್ಪತ್ರೆಯಲ್ಲಿ ಬೀಡು ಬಿಟ್ಟಿದ್ದು, ಗಾಯಾಳುಗಳ ಊಟೋಪಚಾರಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಕಿರಣ ರಜಪೂತ್, ಶಿವಶಂಕರ ಜುಟ್ಟಿ, ಮಲಗೌಡ ಪಾಟೀಲ, ಪಜಲ್ ಮಕಾನದಾರ್,
ಪ್ರೋ. ನಿಲೇಶ ಸಿಂಧೆ, ಶ್ರೀಧರ ಪಾಟೀಲ, ನಿಂಗಪ್ಪಾ ಜಾಧವ ಹಾಗೂ ಇತರರು ಇದ್ದರು.