ಬೆಳಗಾವಿ : ಚಿಕ್ಕೋಡಿ ಕಾನೂನು ಪದವಿ ಓದುತ್ತಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ನಗರದಲ್ಲಿ ನಡೆದಿದೆ .
ಮೃತ ಯುವಕ ಶಶಾಂಕ ಬಟಕೋಳಿ ವಯಸ್ಸು 19 ವರ್ಷ ಸಾ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಜಂಬಗಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಚಿಕ್ಕೋಡಿ ನಗರದ ಖಾಸಗಿ ಕಾನೂನು ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಶಶಾಂಕ , ಕಾಲೇಜಿನ ಸಮೀಪ ಇರುವ ಪಿಜಿಯಲ್ಲಿ ವಾಸವಾಗಿದ್ದ.
ಮಂಗಳವಾರ ಪಿಜಿಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.