ಬೆಂಗಳೂರು: ಐಪಿಎಲ್ 18ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಲ್ಲೂ ಟಿ20 ಹಬ್ಬದ ಜ್ವರ ಆವರಿಸಿದೆ. ಆರ್ಸಿಬಿ ತಂಡದ ತವರಿನ ಪಂದ್ಯಗಳ ಟಿಕೆಟ್ ಮಾರಾಟವನ್ನು ತಂಡ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬುಧವಾರ ಆರಂಭಿಸಿದ್ದು, ಕನಿಷ್ಠ ₹2,300 ನಿಗದಿಪಡಿಸಲಾಗಿದೆ. ಗರಿಷ್ಠ ಮೊತ್ತದ ಟಿಕೆಟ್ ಮೌಲ್ಯ ₹42,000 ಇದೆ. ಈ ಹಿಂದಿನ ಆವೃತ್ತಿಗಳಂತೆ ಈ ಸಲವೂ ಟಿಕೆಟ್ಗಳ ಬೆಲೆ ದುಬಾರಿಯಾಗಿದ್ದರೂ, ಮೊದಲ ಪಂದ್ಯದ ಟಿಕೆಟ್ಗಳು ಈಗಾಗಲೇ ಖಾಲಿಯಾಗಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಮೊದಲ ತವರಿನ ಪಂದ್ಯವನ್ನು ಏಪ್ರಿಲ್ 02ರಂದು ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ನೆರೆಯುವ ನಿರೀಕ್ಷೆಯಿದ್ದು, ಈಗಾಗಲೇ ಎಲ್ಲಾ ಟಿಕೆಟ್ಗಳು ಸೋಲ್ಡೌಟ್ ಆಗಿವೆ ಎಂದು ವರದಿಯಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಸ್ಟ್ಯಾಂಡ್ಸ್ & ಟಿಕೆಟ್ ಬೆಲೆಗಳು
KIA ವೈರ್ಸ್ & ಕೇಬಲ್ಸ್ A ಸ್ಟ್ಯಾಂಡ್: 2300 ರುಪಾಯಿ
ಬೋಟ್ ಸಿ ಸ್ಟ್ಯಾಂಡ್ & ಪೂಮಾ ‘ಬಿ’ ಸ್ಟ್ಯಾಂಡ್ , ಕನ್ಫರ್ಮ್ ಟಿಕೆಟ್ ಡಿ ಕಾರ್ಪರೇಟ್: 3300 ರುಪಾಯಿ
ಕನ್ಫರ್ಮ್ ಟಿಕೆಟ್ ಜಿಟಿ ಅನೆಕ್ಸ್: 4000 ರುಪಾಯಿ
ಕತಾರ್ ಏರ್ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ ಪಿ1 ಅನೆಕ್ಸ್: 10,000 ರುಪಾಯಿ
ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟೇಡಿಯಂ ಪಿ ಟೆರೆಸ್: 15,000 ರುಪಾಯಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್ಸಿಬಿ ಪಂದ್ಯಗಳ ವೇಳಾಪಟ್ಟಿ
RCB vs GT: April 2, 2025
RCB vs DC: April 10, 2025
RCB vs PBKS: April 18, 2025
RCB vs RR: April 24, 2025
RCB vs CSK: May 3, 2025
RCB vs SRH: May 13, 2025
RCB vs KKR: May 17, 2025
ಐಪಿಎಲ್ 2025 ಟೂರ್ನಿಯ ಕಿರು ಮಾಹಿತಿ:
ಈ ಬಾರಿ 10 ತಂಡಗಳು ಪಾಲ್ಗೊಳ್ಳಲಿದ್ದು, 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಮೇ 25ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಉದ್ಘಾಟನಾ ಪಂದ್ಯ ಹಾಗೂ ಫೈನಲ್ಗೆ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 12 ದಿನ ಡಬಲ್ ಹೆಡರ್(ದಿನಕ್ಕೆ 2 ಪಂದ್ಯ) ಇರಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ, 2ನೇ ಪಂದ್ಯ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
ಕಳೆದ 17 ಸೀಸನ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ನಲ್ಲಿ ಆಡುತ್ತಾ ಬಂದಿದೆ. ಆದರೆ ಇದುವರೆಗೂ ಐಪಿಎಲ್ ಟ್ರೋಫಿ ಮಾತ್ರ ಗಗನ ಕುಸುಮವಾಗಿಯೇ ಉಳಿದಿದೆ. ಮೂರು ಬಾರಿ ಫೈನಲ್ ಪ್ರವೇಶಿಸಿದ್ದೇ ಆರ್ಸಿಬಿ ತಂಡದ ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಇದೀಗ 18ನೇ ಅವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗ ರಜತ್ ಪಾಟೀದಾರ್ಗೆ ಆರ್ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದೆ. ತಂಡದಲ್ಲಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್ಸ್ಟೋನ್, ಜೋಶ್ ಹೇಜಲ್ವುಡ್ ಅವರಂತಹ ಆಟಗಾರರಿದ್ದಾರೆ. ಇನ್ನು ಫಿಲ್ ಸಾಲ್ಟ್, ರಜತ್ ಪಾಟೀದಾರ್, ಯಶ್ ದಯಾಳ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರ ಬಲವು ಆರ್ಸಿಬಿ ತಂಡಕ್ಕಿದ್ದು, ಈ ಬಾರಿಯಾದರೂ ಬೆಂಗಳೂರು ತಂಡವು ಐಪಿಎಲ್ ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.