ಬ
2013 ರಲ್ಲಿ ಚಂದ್ರಗುಪ್ತ ಹಾಗೂ
2014 ರಲ್ಲಿ ರವಿಕಾಂತೇಗೌಡ ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಎಸ್ ಪಿ)ಕಾರ್ಯನಿರ್ವಹಿಸಿದ್ದರು. ಈ ಇಬ್ಬರು ಹಿರಿಯ ಅಧಿಕಾರಿಗಳಿಗೆ ಇದೀಗ ಐಜಿಪಿ ಹುದ್ದೆಗೆ ಬಡ್ತಿ ಸಿಕ್ಕಿದೆ.
ಬೆಂಗಳೂರು :
ಬೆಳಗಾವಿಯಲ್ಲಿ ಕೆಲ ವರ್ಷಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ (ಎಸ್ಪಿ) ಕಾರ್ಯನಿರ್ವಹಿಸಿದ್ದ ಅಧಿಕಾರಿಗಳಿಗೆ ಇದೀಗ ಬಡ್ತಿ ಸಿಕ್ಕಿದೆ. ಚಂದ್ರಗುಪ್ತ ಮತ್ತು ರವಿಕಾಂತೇಗೌಡ ಬೆಳಗಾವಿ ಜಿಲ್ಲೆಯ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದ್ದರು.
ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಬ್ದುಲ್ ಸಲೀಂ, ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ರವಿಕಾಂತೇಗೌಡ, ಮೈಸೂರು ನಗರ ಪೊಲೀಸ್ ಕಮಿಷನರ್ ಚಂದ್ರಗುಪ್ತ ಸೇರಿದಂತೆ ಇತರ 11 ಐಪಿಎಸ್ ಅಧಿಕಾರಿಗಳನ್ನು ಸೋಮವಾರ ವರ್ಗಾವಣೆಗೊಳಿಸಿದೆ.
ಎಂ.ಅಬ್ದುಲ್ ಸಲೀಂ-ವಿಶೇಷ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು ನಗರ, ಉಮೇಶ ಕುಮಾರ್-ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆಡಳಿತ ವಿಭಾಗ, ದೇವಜ್ಯೋತಿ ರೇ-ಐಜಿಪಿ ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ, ರಮಣ ಗುಪ್ತ-ಜಂಟಿ ಪೊಲೀಸ್ ಕಮಿಷನರ್, ಬೆಂಗಳೂರು ನಗರ, ಬಿ.ಆರ್.ರವಿಕಾಂತೇಗೌಡ-ಡಿಐಜಿ, ಸಿಐಡಿ.
ಬಿ.ಎಸ್.ಲೋಕೇಶ್ ಕುಮಾರ್- ಡಿಐಜಿ ಬಳ್ಳಾರಿ ವಲಯ, ಚಂದ್ರಗುಪ್ತ-ಡಿಐಜಿ ಪಶ್ಚಿಮ ವಲಯ ಮಂಗಳೂರು, ಶರಣಪ್ಪ ಎಸ್.ಡಿ.- ಜಂಟಿ ಕಮಿಷನರ್ ಅಪರಾಧ ವಿಭಾಗ ಬೆಂಗಳೂರು ನಗರ, ಎಂ.ಎನ್. ಅನುಚೇತ್- ಜಂಟಿ ಕಮಿಷನರ್ ಸಂಚಾರ ವಿಭಾಗ ಬೆಂಗಳೂರು ನಗರ, ರವಿ ಚನ್ನಣ್ಣವರ- ವ್ಯವಸ್ಥಾಪಕ ನಿರ್ದೇಶಕ ಕಿಯೋನಿಕ್ಸ್, ಬಿ.ರಮೇಶ್ ಪೋಲಿಸ್ ಕಮಿಷನರ್ ಮೈಸೂರು ನಗರ.