ಬೆಳಗಾವಿ: ಬೆಳಗಾವಿ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ವೈ.ಜೆ.ಭಜಂತ್ರಿ(ರವಿ ಭಜಂತ್ರಿ) ನೇಮಕಗೊಂಡಿದ್ದಾರೆ. ಸದ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಲೀಲಾವತಿ ಹಿರೇಮಠ ಅವರು ಡಿಡಿಪಿಐಯಾಗಿ ಪದೋನ್ನತಿ ಹೊಂದಿದ್ದರಿಂದ ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆ ಖಾಲಿ ಇತ್ತು. ಡಯಟ್ ಹಿರಿಯ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಭಜಂತ್ರಿ ಈ ಮೊದಲು ಬೆಳಗಾವಿ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.
ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ರವಿ ಭಜಂತ್ರಿ ನೇಮಕ
