ಬೆಳಗಾವಿ :
ನಗರದ ವಡಗಾವಿಯ ಆದರ್ಶ ವಿದ್ಯಾ ಮಂದಿರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ವತಿಯಿಂದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಹಳೆ ಬೆಳಗಾವಿಯಲ್ಲಿ ದಿನಾಂಕ: ೨೬-೯-೨೦೨೨ ರಿಂದ ೨-೧೦-೨೦೨೨ ರವರೆಗೆ ನಡೆಸಲಾಯಿತು.
೨೬-೯-೨೦೨೨ ರಂದು ಅಮರಸಿಂಹ ಮ ಪಾಟೀಲ ಅವರ ಪತ್ನಿ ಭಾಗ್ಯಶ್ರೀ. ಅಮರಸಿಂಹ. ಪಾಟೀಲರು ಶಿಬಿರ ಉದ್ಘಾಟಿಸಿದರು.
ಬೆಳಗಾವಿ ಜಿಲ್ಲಾ ಕಮಾಂಡೆಟ್ ಡಾ.ಕಿರಣ ನಾಯಿಕ ಆಗಮಿಸಿದ್ದರು. ಹಳೆ ಬೆಳಗಾವಿಯ ರಾಮಲಿಂಗೇಶ್ವರ ಸಮುದಾಯ ಭವನದ ಅದ್ಯಕ್ಷರಾದ ಸಂತೋಷ ಶೀವನಗೇಕರ, ಕಲ್ಮೇಶ್ವರ ದೇವಸ್ಥಾನ ಅಧ್ಯಕ್ಷರಾದ ದೇವಿದಾಸ ಖನ್ನೂಕರ ಉಪಸ್ಥಿತಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಪಿ.ಶಿವರಾಯಿ ಹಾಗೂ ಸುಜಾತಾ ಖರಾಡೆ, ಹಾಗೂ ಎನ್.ಎಸ್.ಎಸ್ ಅಧಿಕಾರಿ ದೀಪಾ ಚೌಗಲೆ ಪಾಲ್ಗೊಂಡಿದ್ದರು. ಏಳು ದಿನಗಳ ವರೆಗಿನ ಶಿಬಿರದಲ್ಲಿ ೫೦ ಸ್ವಯಂ ಸೇವಕರು ಹಾಜರಿದ್ದರು.
ದಿ.೨ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಸರಿತಾ ಮೂಟ್ರಾಂಚೆ, ಎಸ್,ಜಿ, ರೇಡೆಕರ, ಭಾಗ್ಯಶ್ರೀ ಚೌಗಲೆ, ಅನುಸೂಯಾ ಹಿರೇಮಠ, ಜಿ,ಎ, ಖನ್ನೂಕರ ಹಾಗೂ ರಾಮಲಿಂಗೇಶ್ವರ ಸಮುದಾಯದ ವ್ಯವಸ್ಥಾಪಕರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಜಿ.ಎ. ಖನ್ನೂಕರ ಆಗಮಿಸಿದ್ದರು.
ಒಂದು ವಾರಕಾಲ ಹಳೆ ಬೆಳಗಾವಿ ಪ್ರದೇಶದ ಸ್ವಚ್ಛತಾ, ರಸ್ತೆ ಸರಿಪಡೆಸುವುದು ಸೇರಿದಂತೆ ಇನ್ನತರ ಕೆಲಸಗಳನ್ನು ಪೂರೈಸಲಾಯಿತು.