ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿವಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಹಿರೇ ಬಾಗೇವಾಡಿ ಮಲ್ಲಪ್ಪನ ಗುಡ್ಡದಲ್ಲಿ ನೂತನ ಕ್ಯಾಂಪಸ್ ಕಾಮಗಾರಿ ನಡೆಯುತ್ತಿದೆ. ಅಲ್ಲಿಗೆ ಭೇಟಿ ನೀಡಿದ ಡಿಸಿ ನಿತೇಶ ಪಾಟೀಲ, ರೈತರ ಸಮ್ಮುಖದಲ್ಲಿಯೇ ಅಧಿಕಾರಿಗಳ ನಡೆಗೆ ಹರಿಹಾಯ್ದರು.
ವಿವಿ ಅಧಿಕಾರಿಗಳು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ನಾಶ ಮಾಡಿದ್ದಾರೆ, ಈ ಬಗ್ಗೆ ಕೇಳಿದರೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ರೈತರು ದೂರಿದರು.
ಅಧಿಕಾರಿಗಳು ವಿವಿ ಕೆಲಸಕ್ಕೆ ರೈತರ ತಕರಾರು ಇಲ್ಲ, ಎಸಿಯವರು ಕರೆದ ಸಭೆಗೂ ಬಂದಿಲ್ಲ ಎಂದು ಹೇಳಿದ್ದರು. ಆದರೆ, ಇಂದು ಸ್ಥಳ ಪರಿಶೀಲನೆಗೆ ಸ್ವತಃ ತೆರಳಿದ್ದ ವೇಳೆ ನೈಜ ಸ್ಥಿತಿ ಅರಿತ ಜಿಲ್ಲಾಧಿಕಾರಿ ನಿತೇಶ ಪಾಟೀಲ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ವಾಗ್ದಾನ ನೀಡಿದರು.