ಬೆಳಗಾವಿ : ಹಿರಿಯ ಸಮಾಜ ಸೇವಕ ಮತ್ತು ಪರಿಸರವಾದಿ ಡಾ. ಶಿವಾಜಿ ಕಾಗಣಿಕರ್ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ವಿಶ್ವವಿದ್ಯಾಲಯದ ಕುಲಪತಿ ಸಿ.ಎಂ. ತ್ಯಾಗರಾಜ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಮಂಗಳವಾರ ಸುವರ್ಣ ವಿಧಾನ ಸಭಾ ಭವನದಲ್ಲಿ ನಡೆಯಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹದಿನಾಲ್ಕನೇ ಘಟಿಕೋತ್ಸವ ಸಮಾರಂಭದಲ್ಲಿ ಶಿವಾಜಿ ಕಾಗಣಿಕರ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ.
ಕಟ್ಟಣಬಾವಿ, ನಿಂಗೆನಹಟ್ಟಿ, ಗುರಮ್ಹಟ್ಟಿ, ಕಡೋಲಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಎರಡು ಲಕ್ಷ ಗಿಡಮರಗಳನ್ನು ನೆಟ್ಟಿರುವುದು, ಮರ ಸಂರಕ್ಷಣೆ, ಭೂಮಿಯನ್ನು ನೀರಾವರಿಗೆ ತರಲು ಕೊಳಗಳು, ಬಾವಿಗಳು ಮತ್ತು ಅಣೆಕಟ್ಟುಗಳ ನಿರ್ಮಾಣ ಅವರ ಸಮಾಜಸೇವೆಯ ಅವಿಭಾಜ್ಯ ಅಂಗವಾಗಿದೆ.
ಇದರೊಂದಿಗೆ, ಅರಣ್ಯ ಪ್ರದೇಶಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಅನಕ್ಷರಸ್ಥರಿಗೆ ವಯಸ್ಕ ಶಿಕ್ಷಣವನ್ನು ಪ್ರಾರಂಭಿಸಿದ ಡಾ. ಶಿವಾಜಿ ಕಾಗಣಿಕರ್ ಅವರ ಅನುಕರಣೀಯ ಮತ್ತು ಸ್ಪೂರ್ತಿದಾಯಕ ಕೆಲಸವನ್ನು ಗಮನಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದೆ ಎಂದು ವಿವರಿಸಿದರು.


