ಬೆಳಗಾವಿ :
ವಿಧಾನಸಭಾ ಚುನಾವಣೆ ಈಗಲೇ ರಂಗೇರತೊಡಗಿದೆ. ಚುನಾವಣೆಗೆ 6ತಿಂಗಳು ಇರುವಾಗಲೇ ಕಣಕ್ಕಿಳಿಯುವವರು ಯಾರು ಎನ್ನುವುದು ನಿಶ್ಚಿತವಾಗ ತೊಡಗಿದೆ.
ಅದರಲ್ಲೂ ಜಿಲ್ಲೆಯ ಪ್ರತಿಷ್ಠಿತ ರಾಯಬಾಗ ಅಥವಾ ಕುಡಚಿ ಮತಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಯಲು ಐಎಎಸ್ ಅಧಿಕಾರಿಯೊಬ್ಬರು ತುರುಸಿನ ತಯಾರಿ ನಡೆಸಿದ್ದಾರೆ.
ಕರ್ನಾಟಕ ಮೂಲದ ಹಿರಿಯ ಐಎಎಸ್ ಅಧಿಕಾರಿ, ತಮಿಳುನಾಡು ರಾಜ್ಯದ ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ ಕಾರ್ಯಕ್ರಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಂಭು ಕಲ್ಲೋಳಿಕರ ಅವರು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆಯಿದೆ.
ರಾಯಭಾಗ ಮೂಲದ ಶಂಭು ಕಲ್ಲೋಳಿಕರ್ ಅವರು 1991 ನೇ ಕೇಡರ್ ಐಎಎಸ್ ಅಧಿಕಾರಿ. ಕೇಂದ್ರ, ರಾಜ್ಯದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇವರು ಇದೀಗ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದು ರಾಜ್ಯದ ಹಲವು ಕಾಂಗ್ರೆಸ್ ನಾಯಕರ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ವಿಆರ್ ಎಸ್ ಪಡೆದ ನಂತರ ಕರ್ತವ್ಯದಿಂದ ಬಿಡುಗಡೆಯಾಗಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

 
             
         
         
        
 
  
        
 
    