ನವದೆಹಲಿ:
ಮೂರು ದಶಕಗಳ ಹಿಂದೆ ರಮನಂದ ಸಾಗರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ.
ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುವುದಾಗಿ ಹೇಳಿದೆ.
ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ… ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ರಾಮಾಯಣ’ ಬರಲಿದೆ ಎಂದು ಡಿಡಿ ನ್ಯಾಷನಲ್ ಎಕ್ಸ್ನಲ್ಲಿ ತಿಳಿಸಿದೆ.
80 ಮತ್ತು 90 ರ ದಶಕದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ, ಶ್ರೀರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ಕಾಣಿಸಿಕೊಂಡಿದ್ದಾರೆ. ದೇಶದಾದ್ಯಂತ ಜನಮನ್ನಣೆಯನ್ನು ಈ ಧಾರಾವಾಹಿ ಗಳಿಸಿತ್ತು.
ಕೊರೊನಾ ಲಾಕ್ಡೌನ್ ವೇಳೆಯೂ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಲೂ ಲಕ್ಷಾಂತರ ಜನರು ವೀಕ್ಷಿಸಿ ಜನಪ್ರಿಯತೆ ಪಡೆದುಕೊಂಡಿತ್ತು.
1987ರ ಜೂನ್ 25ರಿಂದ 1988ರ ಜುಲೈ 31ರವರೆಗೆ ಪ್ರತೀ ರವಿವಾರ ಮುಂಜಾನೆ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ಅವರ ಮೆಗಾ ಧಾರಾವಾಹಿ ʻರಾಮಾಯಣʼ ಭಾರತದಲ್ಲಿ ಹೊಸ ಸಂಚಲನ ಹುಟ್ಟು ಹಾಕಿತ್ತು. ಇದೀಗ ಮತ್ತೆ ‘ರಾಮಾಯಣ’ ಮರು-ಪ್ರಸಾರವನ್ನು ಪ್ರಾರಂಭಿಸಲಿದೆ. ʻರಾಮಾಯಣʼವನ್ನು ಡಿಡಿ ನ್ಯಾಷನಲ್ ಫ.5ರಿಂದ ಮರು ಪ್ರಸಾರ ಮಾಡುತ್ತಿದೆ.
1987-88ರ ಅವಧಿಯಲ್ಲಿ ಪ್ರತೀ ಆದಿತ್ಯವಾರ ಮುಂಜಾನೆ ಈ ಧಾರಾವಾಹಿಯನ್ನು ದೂರದರ್ಶನದ ಮೂಲಕ ಪ್ರಸಾರ ಆದಾಗ ಅದು ಜಾಗತಿಕ ದಾಖಲೆಯನ್ನು ಮಾಡಿತ್ತು. ಇದೀಗ ಡಿಡಿ ನ್ಯಾಷನಲ್ ಫ.5ರಿಂದ ಪ್ರತಿದಿನ ಸಂಜೆ 6ಗಂಟೆ ಹಾಗೂ ಮರುದಿನ ಮಧ್ಯಾಹ್ನ 12ಗಂಟೆಗೆ ಪ್ರಸಾರ ಮಾಡುವುದಾಗಿ ಹೇಳಿಕೊಂಡಿದೆ.
ಕೊರೊನಾ ಲಾಕ್ಡೌನ್ ವೇಳೆಯೂ ʻರಾಮಾಯಣʼ ಧಾರಾವಾಹಿ ಪ್ರಸಾರ ಕಂಡಿತ್ತು. ಲಕ್ಷಾಂತರ ಜನರನ್ನು ವೀಕ್ಷಿಸಿದ್ದರು. ʻಮತ್ತೆ ರಾಮಾಯಣ ಕಾರ್ಯಕ್ರಮವನ್ನು ಪ್ರಸಾರ ಮಾಡಿ ಎಂದು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಪ್ರೇಕ್ಷಕರಿಗೆ ಆಕರ್ಷಕ ಮನರಂಜನೆಯನ್ನು ಒದಗಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆʼ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆ ನೀಡಿದೆ.
ಸಂಜಯ್ ಜೋಗ್ ಅವರು ಭರತ, ಅಂಜಲಿ ವ್ಯಾಸ್ ಅವರು ಊರ್ಮಿಳಾ, ಅರವಿಂದ ತ್ರಿವೇದಿ ಅವರು ರಾವಣ, ಲಲಿತಾ ಪವಾರ್ ಅವರು ಮಂಥರೆ ಪಾತ್ರದಲ್ಲಿ ನಟಿಸಿದ್ದರು. ಆಗಿನ ಕಾಲಕ್ಕೆ ಒಂದು ಸಂಚಿಕೆಗೆ (ಅವಧಿ 45 ನಿಮಿಷ) ಒಂಬತ್ತು ಲಕ್ಷ ಖರ್ಚು ಮಾಡಿದ್ದ ಈ ಧಾರಾವಾಹಿ ಅದ್ಧೂರಿಯ ಸೆಟ್ ಮತ್ತು ಮೇಕಿಂಗ್ ಮೂಲಕ ಜನಪ್ರಿಯತೆ ಪಡೆಯಿತು. ಪ್ರತೀ ಕಂತನ್ನು ಅಂದಾಜು 77 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು ಎಂದು ವರದಿಯಾಗಿದೆ. ಐದು ಖಂಡಗಳ 17 ದೇಶಗಳು ಈ ಧಾರಾವಾಹಿಯನ್ನು ಪ್ರಸಾರ ಮಾಡಿದವು.
ಈ ಧಾರಾವಾಹಿಯ ಜನಪ್ರಿಯತೆಯಿಂದ ಪ್ರಭಾವಿತವಾಗಿ ರಮಾನಂದ್ ಸಾಗರ್ ಅವರು ಅದರ ಎರಡನೇ ಭಾಗವಾದ ರಾಮಾಯಣದ ಉತ್ತರ ಕಾಂಡದ ಲವ ಕುಶರ ಕತೆಯನ್ನು ಧಾರಾವಾಹಿ ಮಾಡಿದರು. ಅದೂ ಪ್ರಸಾರವಾಗಿ ಜನಪ್ರಿಯವಾಯಿತು.