ಬೆಳಗಾವಿ :
ಸಪ್ತಸಾಗರದಾಚೆ ಎಲ್ಲೋ ಸಿನಿಮಾ ವಿಜಯ ಯಾತ್ರೆ ಹಿನ್ನೆಲೆಯಲ್ಲಿ ಕನ್ನಡದ ಖ್ಯಾತ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಸೆಪ್ಟೆಂಬರ್ 10 ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.
ನಗರದ ಕಪಿಲ್ ನ್ಯೂಕ್ಲಿಯಸ್ ಮಾಲ್ ಗೆ ಮಧ್ಯಾಹ್ನ 3:30ಕ್ಕೆ ಆಗಮಿಸಲಿರುವ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್ ಮತ್ತು ನಿರ್ದೇಶಕ ಹೇಮಂತ್ ರಾವ್ ಪ್ರೇಕ್ಷಕರೊಂದಿಗೆ ಈ ಚಲನಚಿತ್ರದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.