- ತಹಶಿಲ್ದಾರ ಬಡ್ತಿ ಪಡೆದ ಕಾಕತಿ ನಾಡಕಛೇರಿ ದಶಕದ DT..!
ಬೆಳಗಾವಿ : ತಾಲೂಕಿನ ಕಾಕತಿ ನಾಡ ಕಛೇರಿಯಲ್ಲಿ 10 ವರ್ಷಗಳ ಕಾಲ ಉಪತಹಶೀಲ್ದಾರರಾಗಿ ಪರಿಪೂರ್ಣವಾಗಿ ಕಾರ್ಯನಿರ್ವಹಿಸಿ ಜನಮನ ಗೆದ್ದು, ಇತ್ತೀಚಿಗೆ 6 ತಿಂಗಳ ಹಿಂದಷ್ಟೇ ಯಮಕನಮರಡಿ ನಾಡ ಕಛೇರಿ ಉಪತಹಶೀಲ್ದಾರ ಆಗಿ ವರ್ಗಾವಣೆಗೊಂಡಿದ್ದ ಉಪ ತಹಶೀಲ್ದಾರ ರಾಕೇಶ ಬುವಾ ಅವರು ತಹಶಿಲ್ದಾರ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಇದರ ಬೆನ್ನಲೆ ಇವರನ್ನು ಕಾಗವಾಡ ತಾಲೂಕಿನ ಗ್ರೇಡ್-2 ತಹಶೀಲ್ದಾರ ಸ್ಥಾನಕ್ಕೆ ನಿನ್ನೆ (ಶುಕ್ರವಾರ) ಸರಕಾರ ನಿಯುಕ್ತಿಗೊಳಿಸಿ ಆದೇಶ ಹೋರಡಿಸಿದೆ.
ಇವರೊಂದಿಗೆ ಒಟ್ಟು 31 ಜನ ಅಧಿಕಾರಿಗಳು ಬಡ್ತಿ ಪಡೆದಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ತಹಶಿಲ್ದಾರ ಮಟ್ಟದ ಹುದ್ದೆ ಪಡೆಯುವಲ್ಲಿ ಇವರೊಬ್ಬರೆ ಯಶಸ್ವಿಯಾಗಿದ್ದಾರೆ.
ನಿಷ್ಠಾವಂತ ಅಧಿಕಾರಿಯಾಗಿ ದಶಕದವರೆಗೆ ಕಾಕತಿ ನಾಡಕಛೇರಿ ಸೇವೆ..!
63 ಹಳ್ಳಿಗಳನ್ನು ಒಳಗೊಂಡಿರುವ ಕಾಕತಿ ನಾಡಕಛೇರಿಗೆ ೧೧ ವರ್ಷಗಳ ಹಿಂದೆ ಯುವ ಉಪತಹಶೀಲ್ದಾರ ಆಗಿ ಅಧಿಕಾರ ಸ್ವೀಕರಿಸಿದ ಬುವಾ ಬಹುತೇಕ ಗುಡ್ಡಗಾಡು ಹಳ್ಳಿ ಹಾಗೂ ಪ್ರದೇಶಗಳಲ್ಲಿನ ಸಾವಿರಾರು ಬಡ ಜನರಿಗೆ ಆದಾಯ, ಜಾತಿ, ಪಿಂಚಣಿ, ವಾರಸಾ ಸೇರಿದಂತೆ ಅವಶ್ಯಕತೆ ಇರುವ ಎಲ್ಲ ಪ್ರಮಾಣ ಪತ್ರಗಳನ್ನು ಮನೆ ಮನೆ ತಲುಪಿಸುವ ಮಹತ್ವದ ಕಾರ್ಯವನ್ನು ರಾಕೇಶ್ ಬುವಾ ಮಾಡಿದ್ದು ಇಂದಿಗೂ ಇಲ್ಲಿನ ಜನರ ಮನ ಮಾನಸದಲ್ಲಿ ಅಚ್ಚಳಿಸದಂತೆ ಉಳಿದಿದೆ.
ಉಪತಹಶೀಲ್ದಾರ ಹುದ್ದೆಯಿಂದ ತಹಶಿಲ್ದಾರ ಹುದ್ದೆಗೆ ಬಡ್ತಿ ಪಡೆದು ಕಾಗವಾಡ ಗ್ರೇಡ್-2 ತಹಶಿಲ್ದಾರ ಆಗಿ ನಿಯುಕ್ತಿಗೊಂಡಿರುವ ಇವರನ್ನು ಬೆಳಗಾವಿ ತಹಶಿಲ್ದಾರ ಕಛೇರಿ, ಕಾಕತಿ ಹಾಗೂ ಯವಕನಮರಡಿ ನಾಡ ಕಛೇರಿ ಸಿಬ್ಬಂದಿಗಳು ಹೃದಯದಿಂದ ಅಭಿನಂದಿಸಿದ್ದಾರೆ.