ಬೆಂಗಳೂರು: 2025-26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಪ್ರಮುಖ ನಟ ಹಾಗೂ ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ ಸೇರಿದಂತೆ ಒಟ್ಟು 70 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಕ್ಟೋಬರ್ 30ರಂದು ಸುದ್ದಿಗೋಷ್ಠಿ ನಡೆಸಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದರು. ಈ ಬಾರಿ ಪ್ರಶಸ್ತಿಯ ಆಯ್ಕೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.
ಪ್ರಮುಖವಾಗಿ, ಈ ಬಾರಿ ಮೊದಲ ಬಾರಿಗೆ ಯಾವುದೇ ಅರ್ಜಿ ಆಹ್ವಾನಿಸದೆ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಸಚಿವರು ತಿಳಿಸಿದ್ದಾರೆ, “ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯ ಅಡಿಯಲ್ಲಿ ಕ್ಷೇತ್ರವಾರು ಸಾಧಕರನ್ನು ಗುರುತಿಸಿ ಆಯ್ಕೆ ಸಲಹಾ ಸಮಿತಿಯು ನಾಲ್ಕೈದು ಸಭೆಗಳಲ್ಲಿ ಅಂತಿಮ ಪಟ್ಟಿ ತಯಾರಿಸಿದೆ. ಈ ಬಾರಿ ಯಾವುದೇ ಸಂಘ–ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ, ಸಂಪೂರ್ಣವಾಗಿ ವೈಯಕ್ತಿಕ ಸಾಧಕರಿಗೆ ಮಾತ್ರ ಗೌರವ ನೀಡಲಾಗಿದೆ ಎಂದರು.
ಒಟ್ಟು 70 ಸಾಧಕರ ಪೈಕಿ 12 ಮಂದಿ ಮಹಿಳೆಯರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸಾಹಿತ್ಯ, ಕಲೆ, ಶಿಕ್ಷಣ, ಕ್ರೀಡೆ, ಸಮಾಜಸೇವೆ, ವಿಜ್ಞಾನ ಹಾಗೂ ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಈ ಗೌರವ ದೊರಕಿದೆ.
ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 1ರಂದು ವಿಧಾನ ಸೌಧದ ನಾದಪ್ರಭು ಕೆಂಪೇಗೌಡ ವೇದಿಕೆಯಲ್ಲಿ ನಡೆಯಲಿದೆ. ವಿಜೇತರಿಗೆ ₹5 ಲಕ್ಷ ನಗದು, ಸ್ಮರಣ ಫಲಕ ಹಾಗೂ ಗೌರವ ಪತ್ರವನ್ನು ನೀಡಲಾಗುತ್ತದೆ.
ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದಾದ್ಯಂತ ಅಭಿನಂದನೆಗಳ ಹಾರವು ಹರಿದು ಬರುತ್ತಿದೆ. ಕನ್ನಡ ಸಂಸ್ಕೃತಿ ಪ್ರೇಮಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪುರಸ್ಕೃತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದ್ದು, ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಈ ಮೂಲಕ ತಿಳಿಸುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಪ್ರಶಸ್ತಿ ನೀಡಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 12 ಮಂದಿ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ರು, ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಾಹಿತ್ಯ ಕ್ಷೇತ್ರ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ತುಂಬಾಡಿ ರಾಮಯ್ಯ ತುಮಕೂರು
ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ ತುಮಕೂರು
ರಹಮತ್ ತರೀಕೆರೆ ಚಿಕ್ಕಮಗಳೂರು
ಹ.ಮ. ಪೂಜಾರ ವಿಜಯಪುರ
ಜಾನಪದ
ಬಸಪ್ಪ ಭರಮಪ್ಪ ಚೌಡ್ಕಿ ಕೊಪ್ಪಳ
ಬಿ. ಟಾಕಪ್ಪ ಕಣ್ಣೂರು ಶಿವಮೊಗ್ಗ
ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ ಬೆಳಗಾವಿ
ಹನುಮಂತಪ್ಪ, ಮಾರಪ್ಪ, ಚೀಳಂಗಿ ಚಿತ್ರದುರ್ಗ
ಎಂ. ತೋಪಣ್ಣ ಕೋಲಾರ
ಸೋಮಣ್ಣ ದುಂಡಪ್ಪ ಧನಗೊಂಡ ವಿಜಯಪುರ
ಮತಿ ಸಿಂಧು ಗುಜರನ್ ದಕ್ಷಿಣ ಕನ್ನಡ
ಎಲ್. ಮಹದೇವಪ್ಪ ಉಡಿಗಾಲ ಮೈಸೂರು
ಸಂಗೀತ/ ನೃತ್ಯ ಕ್ಷೇತ್ರ
ದೇವೆಂದ್ರಕುಮಾರ ಪತ್ತಾರ್ ಕೊಪ್ಪಳ
ಮಡಿವಾಳಯ್ಯ ಸಾಲಿ ಬೀದರ್
ಪ್ರೊ. ಕೆ. ರಾಮಮೂರ್ತಿ ರಾವ್ ಮೈಸೂರು
ಚಲನಚಿತ್ರ /ಕಿರುತೆರೆ
ಪ್ರಕಾಶ್ ರಾಜ್ ದಕ್ಷಿಣ ಕನ್ನಡ
ಮತಿ ವಿಜಯಲಕ್ಷ್ಮೀ ಸಿಂಗ್ ಕೊಡಗು
ಆಡಳಿತ/ ವೈದ್ಯಕೀಯ
ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ) ಬೆಂಗಳೂರು ದಕ್ಷಿಣ (ರಾಮನಗರ)
ಡಾ. ಆಲಮ್ಮ ಮಾರಣ್ಣ ತುಮಕೂರು
ಡಾ. ಜಯರಂಗನಾಥ್ ಬೆಂಗಳೂರು ಗ್ರಾಮಾಂತರ
ಸಮಾಜ ಸೇವೆ
ಮತಿ ಸೂಲಗಿತ್ತಿ ಈರಮ್ಮ ವಿಜಯನಗರ
ಮತಿ ಫಕ್ಕೀರಿ ಬೆಂಗಳೂರು ಗ್ರಾಮಾಂತರ
ಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ ಉಡುಪಿ
ಕೋಣಂದೂರು ಲಿಂಗಪ್ಪ ಶಿವಮೊಗ್ಗ
ಉಮೇಶ ಪಂಬದ ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
ಕೆ.ದಿನೇಶ್ ಬೆಂಗಳೂರು
ಶಾಂತರಾಜು ತುಮಕೂರು
ಜಾಫರ್ ಮೊಹಿಯುದ್ದೀನ್ ರಾಯಚೂರು
ಪೆನ್ನ ಓಬಳಯ್ಯ ಬೆಂಗಳೂರು ಗ್ರಾಮಾಂತರ
ಶಾಂತಿ ಬಾಯಿ ಬಳ್ಳಾರಿ
ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ
ಹೊರನಾಡು/ ಹೊರದೇಶ
ಜಕರಿಯ ಬಜಪೆ (ಸೌದಿ)
ಪಿ ವಿ ಶೆಟ್ಟಿ (ಮುಂಬೈ)
ಪರಿಸರ
ರಾಮೇಗೌಡ ಚಾಮರಾಜನಗರ
ಮಲ್ಲಿಕಾರ್ಜುನ ನಿಂಗಪ್ಪ ಯಾದಗಿರಿ
ಕೃಷಿ
ಡಾ.ಎಸ್.ವಿ.ಹಿತ್ತಲಮನಿ ಹಾವೇರಿ
ಎಂ ಸಿ ರಂಗಸ್ವಾಮಿ ಹಾಸನ
ಮಾಧ್ಯಮ ಕ್ಷೇತ್ರ
ಕೆ.ಸುಬ್ರಮಣ್ಯ ಬೆಂಗಳೂರು
ಅಂಶಿ ಪ್ರಸನ್ನಕುಮಾರ್ ಮೈಸೂರು
ಬಿ.ಎಂ ಹನೀಫ್ ದಕ್ಷಿಣ ಕನ್ನಡ
ಎಂ ಸಿದ್ಧರಾಜು ಮಂಡ್ಯ
ರಾಮಯ್ಯ ಚಿಕ್ಕಬಳ್ಳಾಪುರ
ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ
ಡಾ. ಆರ್. ವಿ ನಾಡಗೌಡ ಗದಗ


