ಬೆಳಗಾವಿ : ನಗರದ ಲವ್ ಡೇಲ್ ಸೆಂಟ್ರಲ್ ಶಾಲೆಯಲ್ಲಿ ಕಳೆದ 15 ದಿನಗಳಿಂದ ನಡೆದ ನ್ಯಾಷನಲ್ ಲೆವೆಲ್ U-16 ಗರ್ಲ್ಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ 16 ರಾಜ್ಯ ತಂಡಗಳು ಭಾಗವಹಿಸಿದ್ದವು.
ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ರಾಜಸ್ಥಾನ ತಂಡ ಅರ್ಹತೆ ಪಡೆದು ರಾಜಸ್ಥಾನ ತಂಡ 3-1 ಗೋಲಿನ ಅಂತರದಿಂದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು
ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ನಗರ ಪೊಲೀಸ್ ಕಮಿಷನರ್ ಮಾರ್ಟಿನ್, ಡಾ. ಬಿ ಆರ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಪ್ರೇರಣಾ ಘಾಟಿಗೆ, ಶಾಲೆಯ ಪ್ರಾಚಾರ್ಯೆ ಲಕ್ಷ್ಮೀ ಇಂಚಲ್, ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ, ಬೆಳಗಾವಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರೂ ಹಾಜರಿದ್ದರು. ಪಂದ್ಯಾವಳಿಯ ಸಂಪೂರ್ಣ ಜವಾಬ್ದಾರಿ ಮತಿನ್ ಇನಾಮ್ದಾರ್ ಹೊಂದಿದ್ದರು.