ಬೆಳಗಾವಿ :
ರಾಜಸ್ಥಾನ ರಾಜ್ಯದ ಕಂಡೆಲಾ ತಾಲೂಕಿನ ಗೊಹಾರಿಯಾ ಗ್ರಾಮದ ನಿವಾಸಿಯಾದ ಹಂಸರಾಜ ಮೋಹನಲಾಲ್ ಮರ್ಮಾ (೩೯) ಇವರು ಸೆ.೩೦ ೨೦೨೩ ರಂದು ಬೆಳಗ್ಗೆ ೬ ಗಂಟೆಗೆ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಮನೆಯಿಂದ ಯಾರಿಗು ಹೇಳದೆ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಇವರ ಪತ್ನಿಯಾದ ಸಂತೋಷ ದೇವಿ ಹಂಸರಾಜ ಅವರು ಕುಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣಿಯಾದ ವ್ಯಕ್ತಿಯ ಚಹರೆ ಪಟ್ಟಿ: ಎತ್ತರ ೫.೮ ಪುಟ ಗೋಧಿಗೆಂಪು ಮೈ ಬಣ್ಣ ಸದೃಡ ಮೈಕಟ್ಟು ಇದ್ದು, ಬಿಳಿ ಬಣ್ಣದ ಶರ್ಟ ಪ್ಯಾಂಟ್ ಹಾಗೂ ರಾಜಸ್ಥಾನಿ, ಹಿಂದಿ, ಗುಜರಾತಿ ಭಾಷೆ ಬಲ್ಲವರಾಗಿರುತ್ತಾರೆ.
ಸದರಿ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲ ಕುಲಗೋಡ ಪೊಲೀಸ ಠಾಣಿ ದೂರವಾಣಿ ಸಂಖ್ಯೆ ೦೮೩೩೪-೨೨೨೨೩ ಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.