ಬೆಳಗಾವಿ :
ರಾಯಬಾಗ ಶ್ರೀ ಹೀರಾಬಾಯಿ ಭರಮ ಚೌಗುಲೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೆಳಗಾವಿ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ
ಮಲ್ಲಿಕಾರ್ಜುನ ಪೂಜಾರಿ ತೃತೀಯ ಸ್ಥಾನ(ಪ್ರಮಾಣ ಪತ್ರ ಹಾಗೂ ನಗದು ಬಹುಮಾನ )ಪಡೆದುಕೊಂಡಿದ್ದಾರೆ.
ಡಾ.ಪಿ.ಜಿ.ಹಳಕಟ್ಟಿಯವರ ಶಿಕ್ಷಣ ಮತ್ತು ಸಮಾಜಕ್ಕೆ ಅವರ ಕೊಡುಗೆ ವಿಷಯವಾಗಿ ಮಲ್ಲಿಕಾರ್ಜುನ ಪೂಜಾರಿ ವಿಷಯ ಮಂಡಿಸಿದ್ದರು.
ಡಾ.ಪಿ.ಜಿ.ಹಳಕಟ್ಟಿ ಜನ್ಮೋತ್ಸವ ವಚನ ಸಾಹಿತ್ಯ ಸಂಶೋಧನ ಶತಮಾನೋತ್ಸವ ಆಚರಣೆ ಪ್ರಯುಕ್ತ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಕರ್ನಾಟಕದ ವಿವಿಧ ಭಾಗಗಳಿಂದ 30 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಆರ್.ಎಲ್. ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್. ಹವಾಲ್ದಾರ್ ,ಆರ್.ಎಲ್. ಕಾನೂನು ಕಾಲೇಜಿನ ಪ್ರೊ.ಮಾಧುರಿ ಕುಲಕರ್ಣಿ, ಚರ್ಚಾ ಸಂಯೋಜಕಿ ಹಾಗೂ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಬಹುಮಾನ ವಿಜೇತರನ್ನು ಅಭಿನಂದಿಸಿದ್ದಾರೆ.