ಬೆಳಗಾವಿ :
ತಿಂಗಳ ನಂತರ ಇಂದು ಸಂಜೆ ಸುಮಾರಿಗೆ ಬೆಳಗಾವಿ ಮಹಾನಗರದಲ್ಲಿ ಮಳೆಯಾಗಿದೆ.
ಸಂಜೆಯಾಗುತ್ತಿದ್ದಂತೆ ಮಳೆ ಸುರಿಯಲು ಪ್ರಾರಂಭವಾಗಿದೆ. ಇದರಿಂದಾಗಿ ಕೆಲಸ ಬಿಟ್ಟು ಮನೆ ಸೇರಿಕೊಳ್ಳುವ ತವಕದಲ್ಲಿದ್ದವರು ಪರದಾಡುವಂತಾಯಿತು.
ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಬೀಳುತ್ತಿದೆ. ಇದೀಗ ಸಹ್ಯಾದ್ರಿ ಶ್ರೇಣಿಯ ತಪ್ಪಲಲ್ಲಿರುವ ಬೆಳಗಾವಿ ಜಿಲ್ಲೆಯಲ್ಲೂ ಮಳೆಯಾಗಿದೆ.
ಆದರೆ, ಜೋರು ಮಳೆ ಬಿದ್ದಿಲ್ಲ. ತುಂತುರು ಮಳೆಯಾಗುತ್ತಿದ್ದು ರಾತ್ರಿ ಯಾವ ಪ್ರಮಾಣದಲ್ಲಿ ಮಳೆ ಬೀಳುತ್ತದೋ ಕಾದು ನೋಡಬೇಕು.