ಬೆಳಗಾವಿ: ಮನರೇಗಾ ಯೋಜನೆಯಡಿ 2024-25 ನೇ ವರ್ಷಕ್ಕೆ ಜಿಲ್ಲಾ ಆದ್ಯತಾ ಕಾಮಗಾರಿಗಳಾದ ಶಾಲಾ ಶೌಚಾಲಯ, ಆಟದ ಮೈದಾನ, ಅಡುಗೆ ಕೊಣೆ, ಶಾಲಾ ಆವರಣ ಗೋಡೆ, ಎಸ್.ಡಬ್ಲ್ಯೂಎಮ್ ಘಟಕ, ಗ್ರಾಮ ಪಂಚಾಯತ ಕಟ್ಟಡ ಇನ್ನು ಚಾಲ್ತಿಯಲ್ಲಿರುವುದು ವಿಷಾದನಿಯವಾಗಿದೆ. ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಇದೇ ತಿಂಗಳ ಅಂತ್ಯದಲ್ಲಿ ಪೂರ್ಣಗೊಳಿಸಲು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರವಿವಾರ (ಫೆ-16) ತಾಲ್ಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ಹಾಗೂ ಸಿಬ್ಬಂದಿಗಳೊಂದಿಗೆ ಜರುಗಿದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವ ದಿನ ಸೃಜನೆಯಲ್ಲಿ ಸನ್ 2023-24 ನೇ ಸಾಲಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿಗೆ 23.26 ಲಕ್ಷ ಮಾನವ ದಿನಗಳು ಕುಂಠಿತವಾಗಿದ್ದು, ಜನರಿಗೆ ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಕೆಲಸ ನೀಡಿ ಮಾರ್ಚ-2025ರ ಅಂತ್ಯದೊಳಗಾಗಿ ನೀಡಿದ ಗುರಿಗನುಗುಣವಾಗಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.
ಸನ್ 2022-23 ನೇ ಸಾಲಿಗೆ ಶೇ 75.19, 2023-24 ಶೇ 53.20 ಹಾಗೂ 2024-25 ನೇ ಸಾಲಿನಡಿ ಕೇವಲ ಶೇ 27.35 ರಷ್ಟು ಮಾತ್ರ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಗಳು ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ ಕಡ್ಡಾಯವಾಗಿ ಮಾರ್ಚ ಅಂತ್ಯದೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಾಂತ್ರಿಕ ಸಂಯೋಜಕರು ಹಾಗೂ ತಾಂತ್ರಿಕ ಸಹಾಯಕರಿಗೆ ನಿರ್ದೇಶನ ನೀಡಿದರು.
ಸನ್ 204-25 ನೇ ಸಾಲಿನಲ್ಲಿ ಚಾಲ್ತಿಯಲ್ಲಿರುವ 13 ಎಸ್.ಎಚ್.ಜಿ ಶೆಡ್ ಗಳನ್ನು ಕೂಡಲೇ ಪೂರ್ಣಗೊಳಿಸುವುದು. 2025-26ನೇ ಸಾಲಿಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಪೂರ್ಣಗೊಳಿಸಲು ಸಭೆಗೆ ತಿಳಿಸಿದರು. ಸಾಮಾಜಿಕ ಪರಿಶೋಧನೆಯ 2550 ಪ್ರಕರಣಗಳು ಬಾಕಿ ಇದ್ದು, ನಿನ್ನೆ ನಡೆದ ಅಭಿಯಾನದಡಿ ಒಂದೇ ದಿನದಲ್ಲಿ 473 ಎ.ಟಿ.ಆರ್. ಇತ್ಯರ್ಥಗೊಳಿಸುವುದು ಪ್ರಶಂಸನೀಯ ಅದರಂತೆ ಬಾಕಿ ಇರುವ ಪ್ರಕರಣಗಳನ್ನು ಅಡಾಕ್ ಸಮಿತಿ ಸಭೆಗಳನ್ನು ಮಾಡುವುದರ ಮೂಲಕ ಮುಕ್ತಾಯಗೊಳಿಸಲು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ, ಯೋಜನಾ ನಿರ್ದೇಶಕ (ಡಿ.ಆರ್.ಡಿ.ಎ) ರವಿ ಎನ್ ಬಂಗಾರೆಪ್ಪನವರ, ಜಿಲ್ಲಾ ಪಂಚಾಯತ ಎ.ಡಿ.ಪಿ.ಸಿ ಬಸವರಾಜ್ ಎನ್. ಜಿಲ್ಲಾ ಐ.ಇ.ಸಿ ಸಂಯೋಜಕರ ಪ್ರಮೋದ ಗೋಡೆಕರ, ಡಿ.ಎಮ್.ಐ.ಎಸ್ ಮೌನೇಶ ಚೌಡಕಿ ಅಕೌಂಟ್ಸ್ ಮ್ಯಾನೇಜರ್ ಮಂಜುನಾಥ ಮಳಗಲಿ, ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ, ತಾಂತ್ರಿಕ ಸಂಯೋಜಕರು, ಟಿ.ಎಮ್.ಐ.ಎಸ್, ತಾಂತ್ರಿಕ ಸಹಾಯಕರು ಹಾಗೂ ಜಿ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.