ಜನ ಜೀವಾಳ ಜಾಲ: ಬೆಳಗಾವಿ:ಭರವಸೆಗಳನ್ನು ನೀಡಿ, ಯುವಕರಿಗೆ ಉದ್ಯೋಗ ನೀಡದ ಬಿಜೆಪಿ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯಲು ಯುವಜನತೆ ಮುಂದಾಗಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಕರೆ ನೀಡಿದರು.
ಇಲ್ಲಿನ ಸಿಪಿಎಡ್ ವೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರ ನೀಡಿದ ಪೊಳ್ಳು ಭರವಸೆಯಿಂದ ಯುವಕರು ಉತ್ಸಾಹ ಕಳೆದುಕೊಂಡಿದ್ದಾರೆ. ಯುವಕರಿಗೆ ಬಲತುಂಬಲೆಂದೇ ರಾಹುಲ್ ಗಾಂಧಿ ಅವರು ಪಣತೊಟ್ಟಿದ್ದು, ಬೆಳಗಾವಿಯಿಂದ ಯುವಕಾಂತ್ರಿ ರ್ಯಾಲಿ ಮಾಡುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ ಎಂದರು.
ಯುವಕರಿಗೆ ಯೋಜನೆ ಘೋಷಣೆ: ಮಾ. 20 ರಂದು 11 ಗಂಟೆಗೆ ಬೆಳಗಾವಿಯಲ್ಲಿ ಯುವಕ್ರಾಂತಿ ರ್ಯಾಲಿ ನಡೆಯಲಿದೆ. ರ್ಯಾಲಿಯನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉದ್ಘಾಟಿಸಲಿದ್ದಾರೆ. ಈ ವೇಳೆ ಯುವಕರಿಗೆ ಯೋಜನೆ ಘೋಷಣೆ ಮಾಡುತ್ತೇವೆ ಎಂದ ಅವರು, ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಬೊಮ್ಮಾಯಿ ಸರ್ಕಾರ ಯುವಕರ ಭವಿಷ್ಯವನ್ನ ಹಾಳು ಮಾಡಿದೆ. ಪಿಎಸ್ ಐ ಹುದ್ದೆ ಸೇರಿದಂತೆ ಸರ್ಕಾರಿ ಹುದ್ದೆಯನ್ನ ಮಾರಾಟ ಮಾಡಿದ್ದಾರೆ. ಕೈಗಾರಿಕೋದ್ಯಮಗಳು ಅನ್ಯರಾಜ್ಯಗಳ ಪಾಲಾಗುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಪಕೋಡಾ ಮಾರಿ:ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರಕ್ಕೇರಿದ ಬಿಜೆಪಿ ಯುವಕರಿಗೆ ಪಕೋಡಾ ಮಾರಾಟ ಮಾಡಿ ಎಂದು ಹೇಳುತ್ತಿದೆ. ಉನ್ನತ ಶಿಕ್ಷಣ ಪಡೆದವರು ಪಕೋಡಾ ಮಾಡಬೇಕಾ..? ಇಂದು ನೌಕರಿಗಾಗಿ ಯುವಕರು ಹರಸಾಹಸ ಪಡುತ್ತಿದ್ದಾರೆ. ಎಂಟು ವರ್ಷಗಳಲ್ಲಿ ನಿರುದ್ಯೋಗ, ಆರ್ಥಿಕ ಮಟ್ಟ ಪಾತಾಳ ಕಂಡಿದೆ ಎಂದು ಬೊಮ್ಮಾಯಿ ಸರ್ಕಾರ ವಿರುದ್ಧ ಕಿಡಿ ಕಾರಿದರು.
ಬಿಜೆಪಿಗೆ ಅಧಿಕಾರ ವ್ಯಾಮೋಹ:-
ಬಿಜೆಪಿಗೆ ಅಧಿಕಾರ ವ್ಯಾ ಮೋಹ ಇದೆ. ಆದರೆ, ಅಭಿವೃದ್ಧಿ ಮಾಡಬೇಕೆಂಬ ಹಂಬಲ ಇಲ್ಲವಾಗಿದೆ. ಶೌಚಾಲಯ ಹೆಸರಿನಲ್ಲಿ ಜನರನ್ನು ಸೆಳೆಯುವ ತಂತ್ರ ಮಾಡುತ್ತಿದ್ದಾರೆ. ಕಾಂಗ್ರೆಸ್ ಎಲ್ಲವನ್ನೂ ಮಾಡಿದೇ ಆದರೆ, ಶೌಚಾಲಯ ಪ್ರಚಾರ ತೆಗೆದುಕೊಂಡಿಲ್ಲ ಎಂದು ಸರ್ಕಾರ ವಿರುದ್ಧ ಚಾಟಿ ಬೀಸಿದರು.
ದುರಾಡಳಿತ ಸರ್ಕಾರವನ್ನು ತಿರಸ್ಕರಿಸಿ: ರಾಜ್ಯದ ಜನತೆ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ನೇಮಕಾತಿ, ಗುತ್ತಿಗೆದಾರರಿಂದ 40% ಕಮಿಷನ್ ಪಡೆದಿರುವ ದುರಾಡಳಿತ ಸರ್ಕಾರವನ್ನು ಜನರು ತಿರಸ್ಕರಿಸಬೇಕು. ಕಾಂಗ್ರೆಸ್ ಪಕ್ಷ ಮನೆಯ ಯಜಮಾನಿಗೆ ನೀಡಲು ಉದ್ದೇಶಿಸಿರುವ .2000 ಮಾಸಿಕ ಹಣವದ ಕುರಿತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದ್ದಾರೆ.
ನುಡಿದಂತೆ ನಡೆದ ಕೈ ಪಕ್ಷ: ಕಾಂಗ್ರೆಸ್ ಪ್ರಣಾಳಿಕೆಗಳನ್ನು ಕಾರ್ಯಕರ್ತರು ಮತದಾರರ ಮನೆಗೆ 10 ದಿನಗಳಲ್ಲಿ ತಲುಪಿಸಿ. ಕಾಂಗ್ರೆಸ್ ಕರ್ನಾಟಕ ಬ್ಯಾಂಡ್ ಉಳಿಸಲು ಹವಣಿಸುತ್ತಿದೆ. ಆದರೇ ಬಿಜೆಪಿ ಕಮಿಷನ್, ಕೋಮುವಾದದಲ್ಲಿ ನಿರತವಾಗಿದೆ. ಗೃಹ ಲಕ್ಷ್ಮೀ ಯೋಜನೆ, ಉಚಿತ ವಿದ್ಯುತ್ ಬಗ್ಗೆ ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಬಿಜೆಪಿ ತಿಂದಿರುವ ಕಮಿಷನ್ ಹಣದಲ್ಲಿ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ 2 ಸಾವಿರ ನೀಡಬಹುದು. ಇದು ಎಲ್ಲಿಗೂ ಹೋಗಲ್ಲ. ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರ ಖಜಾನೆ ಸೇರುತ್ತದೆ. ಸ್ತ್ರೀಯರು ಇಲ್ಲದೇ ಹೋದ ಕುಟುಂಬದಲ್ಲಿ ಪುರುಷರಿಗೆ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.