ರಡ್ಡೇರಹಟ್ಟಿ :
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಶ್ರಾವಣ ಮಾಸದ ಮೂರನೆಯ ಶನಿವಾರದಿಂದ ಸೋಮವಾರದ ವರಗೆ ಅಂದರೆ ದಿನಾಂಕ 2-9-2023 ರಿಂದ ದಿನಾಂಕ 4-9-2023ರ ವರೆಗೆ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಜರುಗಲಿದೆ.
ಜಾತ್ರೆಯ ಅಂಗವಾಗಿ ಶನಿವಾರ ದಿನದಂದು ಜನಪದದ ಕಲೆಯಾದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರವಿವಾರ ರಾಜ್ಯಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ ಹಾಗೂ ಕೊನೆಯ ದಿನವಾದ ಸೋಮವಾರದಂದು ಜಾನಪದ ಕಲೆಯಲ್ಲಿ ಒಂದಾದ ಹಂತಿ ಪದಗಳು ನಡೆಯಲಿವೆ. ಹತ್ತು ಹಲವಾರು ಹಳ್ಳಿ ಸೊಬಗಿನ ಕ್ರೀಡೆಗಳು ನಡೆಯಲಿವೆ. ಈ ಬಸವೇಶ್ವರ ಜಾತ್ರೆಯ ವಿಶೇಷವೇನೆಂದರ ಈ ಯುಗದಲ್ಲಿ ಹಳ್ಳಿ ಸೊಬಗಿನ ಕಾರ್ಯಕ್ರಮಗಳು ಮರೆಯಾಗುತ್ತಿವೆ ಆದರೆ ಇಲ್ಲಿ ಇನ್ನು ಕೂಡಾ ಇವೆ.