ಬೆಳಗಾವಿ :
ಬೆಳಗಾವಿ ಡಿಡಿಪಿಐಯಾಗಿ ಎ.ಬಿ.ಪುಂಡಲೀಕ ಅವರನ್ನು ರಾಜ್ಯ ಸರ್ಕಾರ ಮತ್ತೆ ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿ ಕ್ಷೇತ್ರ ಶಿಕ್ಷಣ ಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಅವರನ್ನು ಖಾನಾಪುರಕ್ಕೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ವಿದ್ಯಾ ಕುಂದರಗಿ ಅವರನ್ನು ನೇಮಕ ಮಾಡಲಾಗಿದೆ. ಮಹಾದೇವಿ ಅಪ್ಪಾಜಿ ನಿಪ್ಪಾಣಿ, ರವೀಂದ್ರ ಬಳಿಗಾರ ಬೆಳಗಾವಿ ಡಿಡಿಪಿಐ ಕಚೇರಿ, ಭಗವಂತ ಮೇಕನಮರಡಿ ಚಿಕ್ಕೋಡಿ, ಆರ್.ಪಿ. ಜುಟ್ಟಣ್ಣನವರ ಕಿತ್ತೂರು ಶಿಕ್ಷಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.